ಸಂಜೀವಿನಿ ಜೀವರಕ್ಷಕ ಟ್ರಸ್ಟ್ ವತಿಯಿಂದ ಉದ್ಯಮಿ ಕೆ.ಎಸ್.ನವೀನ್ ಗೆ ಸನ್ಮಾನ
1 min readಚಿತ್ರದುರ್ಗ: ಸಂಜೀವಿನಿ ಜೀವರಕ್ಷಕ ಟ್ರಸ್ಟ್ ವತಿಯಿಂದ ನಗರದ ಪ್ರವಾಸಿಮಂದಿರದಲ್ಲಿ ಆಯೋಜಿಸಿ ದಂತಹ ಅಭಿನಂದನಾ ಸಮಾರಂಭದಲ್ಲಿ ಉದ್ಯಮಿಗಳಾದ ನವೀನ್ ಕುಮಾರ್ ಕೆ ಎಸ ರವರಿಗೆ ಜಿಲ್ಲೆಯ ಯುವಕರ ನಾಡಿಮಿಡಿತ ಎಂದು ಬಿರುದನ್ನು ನೀಡಿ ಅಭಿನಂದಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದಂತಹ ಸೌಮ್ಯ ಮಂಜುನಾಥ್ ಮಾತನಾಡಿ ನವೀನ್ ಕುಮಾರ್ ಸರ್ ಯುವಕರನ್ನು ಸಮ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವ ಹಲವಾರು ಸಮಾಜಮುಖಿ ಕಾರ್ಯಗಳನ್ನು ಗುರುತಿಸಿಕೊಂಡಿರುವುದು ಖುಷಿ ತಂದಿದೆ ಎಂದು ಮಾತನಾಡಿದರು ನವೀನ್ ಕುಮಾರ್ ಸರ್ ಮಾತನಾಡಿ ಸಂಜೀವಿನಿ ಜೀವರಕ್ಷಕ ಟ್ರಸ್ಟ್ ಒಂದು ಜೀವ ಉಳಿಸುವಂತಹ ಕಾರ್ಯ ಮಾಡುತ್ತಿರುವುದು ರಾಜ್ಯದಲ್ಲಿ ಇಂತಹ ಒಂದು ಸಂಸ್ಥೆ ಹುಟ್ಟಿರುವುದು ಸಂತಸ ತರುವಂತಹ ವಿಷಯ ಮತ್ತೆ ಯಾವುದೇ ಒಂದು ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ಮಾಡುತ್ತಿರುವುದು ನಾಗರಿಕ ಸಮಾಜ ಮೆಚ್ಚುವಂತಹದ್ದು ಈ ಸಂಜೀವಿನಿ ಜೀವ ರೆಕಾರ್ಡ್ಸ್ ಟ್ರಸ್ಟ್ ಮುಂದೆ ಇನ್ನು ಹಲವಾರು ಉತ್ತಮ ಕಾರ್ಯ ಮಾಡಲಿ ಮತ್ತು ರಸ್ತೆ ಅಪಘಾತ ಗಳಿಗೋಸ್ಕರ ನೇ ಕೆಲಸ ಮಾಡುತ್ತಿರುವ ರಾಜ್ಯದ ಏಕೈಕ ತಂಡವಾಗಿ ಗುರುತಿಸಿಕೊಳ್ಳುತ್ತಿದೆ ಎಂದು ಶ್ಲಾಘಿಸಿದರು ಸಂಜೀವಿನಿ ಜೀವರಕ್ಷಕ ಟ್ರಸ್ಟ್ನ ಅಧ್ಯಕ್ಷರಾದ ರಂಗಸ್ವಾಮಿ ಮಾತನಾಡಿ ಶ್ರೀಯುತ ನವೀನ್ ಕುಮಾರ್ ಕೆಎಸ್ ರವರು ಜಿಲ್ಲೆಯಲ್ಲಿ ಹಲವಾರು ಸಮಾಜಮುಖೀ ಕಾರ್ಯಗಳಿಂದ ಗುರುತಿಸಿಕೊಂಡಿದ್ದು ಯುವಕರಲ್ಲಿ ಪ್ರೇರಣೆ ಮೂಡಿಸುವಂತದ್ದು ಕಾರ್ಯಕ್ರಮದಲ್ಲಿ ಸಂಜೀವಿನಿ ಜೀವರಕ್ಷಕ ಟ್ರಸ್ಟ್ ನ ಸದಸ್ಯರು ಮತ್ತು ಪದಾಧಿಕಾರಿಗಳಾದ ವಿನಯಚಂದ್ರ ಶ್ರೀನಿವಾಸ ಪುನೀತ್ ಕುಮಾರ್ ಎಸ್ ಕೊಂಡಪುರದ ಮಾಂತೇಶ್ ಶಶಿಧರ ಸಿ ಮಾಂತೇಶ ಆರ್ ಹರೀಶ್ ಕಿರಣ್ ಕುಮಾರ್ ಶಿವಮೊಗ್ಗದಲ್ಲಿ ಧನುಶ್ ಮತ್ತು ಗಿರೀಶ್ ಭಾಗವಹಿಸಿದ್ದರು