September 16, 2024

Chitradurga hoysala

Kannada news portal

ಭದ್ರಾ ಜಲಾಶಯದಿಂದ 10 ಟಿಎಂಸಿ ನೀರು ವಿ.ವಿ.ಸಾಗರಕ್ಕೆ: ಸಂಸದ ನಾರಾಯಣಸ್ವಾಮಿ

1 min read

ಆನೇಕಲ್ ನಾರಾಯಣಸ್ವಾಮಿ ಹೊರಗಿನವರು, ಗೆದ್ದರು ಮತದಾರರ ಕೈಗೆ ಸಿಗುವುದಿಲ್ಲ, ರೈತರ ಸಂಕಷ್ಟಗಳಿಗೆ ನಾವು ಯಾರನ್ನ ಕೇಳಬೇಕು, ಹೊರಗಿನವರಿಗೆ ಮತ ನೀಡಿದರೆ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂಬಿತ್ಯಾದಿ ಆರೋಪಗಳು ಬಂದಿದ್ದವು. ಆದರೆ ನಾನು ಸಂಸದನಾಗಿ ಅಧಿಕಾರ ವಹಿಸಿಕೊಂಡು ಕ್ಷಣದಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಮಗ್ರ ಪ್ರಗತಿ ಮತ್ತು ಸಮಸ್ಯೆಗಳ ನಿವಾರಣೆಗಾಗಿ ಪ್ರತಿ ದಿನವು ಸ್ಪಂದಿಸಿ ಕೆಲಸ ಮಾಡಿದ್ದೇನೆಂದು ಸಂಸದ ನಾರಾಯಣಸ್ವಾಮಿ ಹೇಳಿದ್ದಾರೆ.
ಅವರು ಪತ್ರಿಕಾ ಹೇಳಿಕೆ ನೀಡಿದ್ದು ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಭದ್ರೆಯ ಆಗಮನಕ್ಕಾಗಿ ಇರುವ ಅಡೆತಡೆಗಳನ್ನು ನಿವಾರಿಸಲು ದೃಢನಿಶ್ಚಯ ಮಾಡಿ ಧಾವಂತದ ಹೆಜ್ಜೆಗಳ ಪ್ರಯತ್ನಗಳನ್ನು ಪ್ರತಿದಿನವೂ ನಡೆಸುತ್ತಿದ್ದೇನೆ. ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಭದ್ರಾ ಜಲಾಶಯ ತುಂಬಿದರೆ ವಿವಿ ಸಾಗರಕ್ಕೆ 10 ಟಿಎಂಸಿ ನೀರು ಹರಿಸುತ್ತೇನೆಂದು ಕೆಲವು ದಿನಗಳ ಹಿಂದೆ ನನ್ನ ಕ್ಷೇತ್ರದ ಜನರಿಗೆ ಭರವಸೆಯ ಮಾತುಗಳನ್ನು ನೀಡಿದ್ದೇ. ಇಂದು ನುಡಿದಂತೆ ನಡೆದಿದ್ದೇನೆ. ಭಾನುವಾರ ಬೆಳಗಿನ ಜಾವ 12:20ರ ಸಮಯಕ್ಕೆ ಬೆಟ್ಟದತಾವರೆಕೆರೆಯ ಪಂಪ್ ಹೌಸ್ ನಿಂದ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದ್ದು ನೀರನ್ನು ಪಂಪ ಮಾಡಿ ಹರಿಸಲಾಯಿತು. ಮೂರು ದಿನಗಳ ಕಾಲ ಸತತ ತಾಂತ್ರಿಕ ಪ್ರಯತ್ನದೊಂದಿಗೆ ವಿದ್ಯುತ್ ಸಂಪರ್ಕದ ಕಾರ್ಯವನ್ನು ಪರೀಕ್ಷಿಸಲಾಯಿತು. ಅಂತಿಮವಾಗಿ VJNL ನಿಗಮದ ಮತ್ತು KPTCL ನಿಗಮದ ಅಧಿಕಾರಿಗಳ ಕಾರ್ಯದಕ್ಷತೆ ಮನಮೆಚ್ಚಿಸಿತು ಎಂದು ತಿಳಿಸಿದರು.
ಇನ್ನೂ ಕೆಲವೇ ದಿನಗಳಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಎಲ್ಲ ಹಳ್ಳಿಗಳಿಗೆ ಕೆರೆಗಳ ಮೂಲಕ ಜೀವಜಲ ಭದ್ರೆಯನ್ನು ತಗೆದುಕೊಂಡು ಹೋಗಲು ಇರುವ ಅಡ್ಡಿಗಳನ್ನು ಎಲ್ಲರ ಸಹಕಾರದೊಂದಿಗೆ ನಿವಾರಿಸಿ ಬಯಲು ಸೀಮೆಯ ಭೂಮಿತಾಯಿಯನ್ನು ಹಚ್ಚಹಸಿರಾಗಿಸುವ ಸಂಕಲ್ಪವನ್ನು ಹೊಂದಿದ್ದೇನೆ ಎಂದು ಅವರು ಭಾವುಕರಾಗಿ ತಿಳಿಸಿದ್ದಾರೆ. ಪ್ರಸ್ತುತ ಭಾಗಶಃ ಪ್ರದೇಶಕ್ಕೆ ನೀರು ತಗೆದುಕೊಂಡು ಹೋಗುವ ನನ್ನ ಧಾವಂತಕ್ಕೆ ಕೈ ಜೋಡಿಸಿ ಸಹಕರಿಸಿದ  ಮುಖ್ಯಮಂತ್ರಿ ಬಿ.ಎಸ್.ಯಡ್ಡಿಯೂರಪ್ಪನವರಿಗೆ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಎಲ್ಲ ಶಾಸಕರಿಗೂ ಹಾಗು ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ಲಕ್ಷ್ಮಣ್ ರಾವ್ ಪೇಶ್ವೆ, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಎಲ್ಲ ಚುನಾಯಿತ ಜನಪ್ರತಿನಿದಿನಗಳಿಗೆ, ರೈತ ಮುಖಂಡರುಗಳಿಗೆ, ಹಾಸನ KPTCL ಮುಖ್ಯ ಅಭಿಯಂತರು, ತುಮಕೂರು KPTCL ಮುಖ್ಯ ಅಭಿಯಂತರರು ಆಧಿನಾರಾಯಣ್, ಭದ್ರಾ ಮೇಲ್ದಂಡೆ ಮುಖ್ಯ ಅಭಿಯಂತರ ರಾಘವನ್, ಬಹುಮುಖ್ಯವಾಗಿ ಕಾರ್ಯಧ್ಯಕ್ಷತೆ ಮೆರೆದು ಕೆಲಸ ನಿರ್ವಹಿಸಿದ ಬೆಟ್ಟದತಾವರೆಕೆರೆ ಪಂಪ್ ಹೌಸ್ ಎಲೆಕ್ಟ್ರಿಕಲ್ ಎಂಜಿನಿಯರ್ ಶ್ರೀಕಾರ್ತಿಕ್ ಶೆಟ್ಟಿ, ಅಸಿಸ್ಟೆಂಟ್ ಕಮಲೇಶ್ ಹಾಗೂ ನಿಗಮದ ಎಲ್ಲ ವರ್ಗದ ಅಧಿಕಾರಿಗಳಿಗೆ, ರೈತ ಭಾಂದವರು ಹಾಗೂ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆಗಳನ್ನು ಸಂಸದರು ಸಲ್ಲಿಸಿದ್ದಾರೆ.

About The Author

Leave a Reply

Your email address will not be published. Required fields are marked *