ಲಾಡ್ಜ್ ಮೇಲೆ ಪೋಲಿಸರ ದಾಳಿ 8 ಮಂದಿ ಬಂಧನ.
1 min readಶಿವಮೊಗ್ಗ: ಪಾರ್ಕ್ ಬಡಾವಣೆಯ ತಿರುಮಲ ಲಾಡ್ಜ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಇಸ್ಪೀಟು ಜೂಜಾಡುತ್ತಿದ್ದ 8 ಮಂದಿಯನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಕೋಟೆ ಠಾಣೆ ಸರ್ಕಲ್ ಇನ್ಸಪೆಕ್ಟರ್ ಚಂದ್ರಶೇಖರ್ ನೇತೃತ್ವದ ತಂಡ ದಾಳಿ ನಡೆಸಿದ್ದು, ಲಾಡ್ಜ್ ಒಳಗಡೆ ಅಕ್ರಮವಾಗಿ ಇಸ್ಪಿಟು ಜೂಜಾಟ ಆಡುತ್ತಿದ್ದ 08 ಜನ ಆರೋಪಿಗಳನ್ನು ಬಂಧಿಸಿ 1,20,260 ರೂ. ಹಣ, 7 ದ್ವಿ ಚಕ್ರ ವಾಹನಗಳು ಹಾಗೂ 08 ಮೊಬೈಲ್ ಫೋನ್’ಗಳನ್ನು ವಶಪಡಿಸಿಕೊಳ್ಳಲಾಗಿದೆ.