ಚಿತ್ರದುರ್ಗದಲ್ಲಿ ಅತಿ ಹೆಚ್ಚು ಮಳೆ – 134 ಮಿ.ಮೀ ಮಳೆ
1 min read
ಚಿತ್ರದುರ್ಗ,ಸೆಪ್ಟೆಂಬರ್09:
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ಚಿತ್ರದುರ್ಗ-01 ರಲ್ಲಿ ಸೆಪ್ಟೆಂಬರ್ 08 ರಂದು 134 ಮಿ.ಮೀ ಮಳೆಯಾಗಿದೆ. ಇದು ಜಿಲ್ಲೆಯ ಅತಿ ಹೆಚ್ಚು ಮಳೆ ಬಿದ್ದ ಪ್ರದೇಶವಾಗಿದೆ. ಜಿಲ್ಲೆಯ ವಿವಿಧೆಡೆ ಆದ ಮಳೆ ವಿವರ ಇಂತಿದೆ.
ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಚಿತ್ರದುರ್ಗ-02 ರಲ್ಲಿ 74.3, ಹಿರೇಗುಟನೂರು 11.3, ಭರಮಸಾಗರ 55.4, ಸಿರಿಗೆರೆ 73.4, ತುರುವನೂರು 16.2, ಐನಹಳ್ಳಿ 31.8. ಹೊಸದುರ್ಗ ತಾಲ್ಲೂಕು ವ್ಯಾಪ್ತಿಯ ಹೊಸದುರ್ಗ 90.8, ಬಾಗೂರು 20, ಮತ್ತೋಡು 37.7, ಶ್ರೀರಾಂಪುರ 10, ಮಾಡದಕೆರೆ 54.2. ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯ ಹೊಳಲ್ಕೆರೆ 60.4, ರಾಮಗಿರಿ 40.2, ಚಿಕ್ಕಜಾಜೂರು 21.8, ಬಿ.ದುರ್ಗ 66, ಹೆಚ್.ಡಿ ಪುರ 72, ತಾಳ್ಯ 18.4. ಮೊಳಕಾಲ್ಮರು ತಾಲ್ಲೂಕು ವ್ಯಾಪ್ತಿಯ ಮೊಳಕಾಲ್ಮುರು 47.8, ರಾಯಾಪುರ 34.6, ಬಿಜಿ.ಕೆರೆ 28.4, ರಾಂಪುರ 19, ದೇವಸಮುದ್ರ 36.2. ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ ಚಳ್ಳಕೆರೆ 55.2, ಪರುಶುರಾಂಪುರ 23.4, ದೇವರಮರಿಕುಂಟೆ 9.6, ತಳಕು 36.4, ನಾಯಕನಹಟ್ಟಿ 7.4. ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಹಿರಿಯೂರು 58.6, ಬಬ್ಬೂರು 46.2, ಸುಗೂರು 45.4, ಇಕ್ಕನೂರು 100, ಈಶ್ವರಗೆರೆ 118.8 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
=====