ಸರ್ಕಾರಿ ನೌಕರರ ದಿನಾಚಣೆಗೆ ಮುಖ್ಯಮಂತ್ರಿ ಹಸ್ತು ಸಂತೋಷ ತಂದಿದೆ:ಜಿಲ್ಲಾ ಅಧ್ಯಕ್ಷ ಮಂಜುನಾಥ್
1 min readಚಿತ್ರದುರ್ಗ:ಕರ್ನಾಟಕ ರಾಜ್ಯ ನೌಕರರ ಸಂಘ ಸ್ಥಾಪನೆಯಾದ ದಿನವನ್ನು “ಸರ್ಕಾರಿ ನೌಕರರ ದಿನಾಚರಣೆ” ಮಾಡಲು ಶ್ರಮಿಸಿದ ಸರ್ಕಾರಿ ನೌಕರರ ಸಂಘದ ಕ್ರಿಯಾಶೀಲ ರಾಜ್ಯ ಅಧ್ಯಕ್ಷರಾದ ಷಡಕ್ಷರಿ ಅವರಿಗೆ ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಹೇಳಿದರು.
ರಾಜ್ಯದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯಧ್ಯಕ್ಷರು ಸಾಕಷ್ಟು ನೌಕರರ ಕಷ್ಟಗಳಿಗೆ ಸ್ಪಂದಿಸುತ್ತ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಮುಖ್ಯಮಂಗತ್ರಿ ಯಡಿಯೂರಪ್ಪ ಅವರಿಗೆ ಸರ್ಕಾರಿ ನೌಕರರ ಸಂಘ ಸ್ಥಾಪನೆಯಾದ ದಿನವನ್ನು ಸರ್ಕಾರಿ ನೌಕರರ ದಿನಾಚರಣೆ ಮಾಡಲು ಒತ್ತಾಯಿಸಿದ್ದು ಮುಖ್ಯಮಂತ್ರಿಗಳು ಸಹ ಸ್ಪಂದಿಸಿ ಆದೇಶ ಸಹ ನೀಡಿದ್ದು ಇದರ ಫಲವಾಗಿ ಸರ್ಕಾರಿ ನೌಕರರ ದಿನಾಚರಣೆ ಆಚರಿಸುವ ಸಂತೋಷ ದಿನ ಇದಕ್ಕೆ ಕಾರಣ ನಮ್ಮ ರಾಜ್ಯ ಅಧ್ಯಕ್ಷರಾದ ಷಡಕ್ಷರಿ ಅವರಿಗೆ ಸದಾ ಎಲ್ಲಾ ನೌಕರರು ಅಬಾರಿಯಾಗಿದ್ದೇವೆ ಎಂದರು. ಸರ್ಕಾರಿ ನೌಕರರು ಸಾಕಷ್ಟು ಒತ್ತಡದ ಮಧ್ಯೆ ಕೆಲಸ ನಿರ್ವಹಿಸುತ್ತಿದ್ದು ಅವರಿಗೆ ವರ್ಷದಲ್ಲಿ ಒಂದು ದಿನವಾದರೂ ಸಹ ತಮ್ಮ ಕ್ರಿಯಾಶೀಲತೆ ಮೂಡಿಸುವ ಉದ್ದೇಶದಿಂದ ಸರ್ಕಾರಿ ನೌಕರರ ದಿನಾಚರಣೆ ಅವಶ್ಯಕವಾಗಿ ಬೇಕಾಗಿದೆ ಎಂದು ಹೇಳುವ ಜೊತೆಗೆ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಜಗದೀಶ್ ಗೌಡಪ್ಪ ಪಾಟೀಲ, ಕೋಶಾಧ್ಯಕ್ಷರಾದ ಶ್ರೀನಿವಾಸ್ ರವರಿಗೆ, ಗೌರವಾಧ್ಯಕ್ಷರಾದ ಶಿವರುದ್ರಯ್ಯರವರಿಗೆ ಹಾಗೂ,,ಸರ್ವ ಪದಾಧಿಕಾರಿಗಳು,ಕೇಂದ್ರ ಸಂಘದ ಪದಾಧಿಕಾರಿಗಳಿಗೆ ಜಿಲ್ಲೆಯ ಸರ್ಕಾರಿ ನೌಕರರ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ.