ಒಪ್ಪದ ಪ್ರೇಮಿಗಳ ಕುಟುಂಬಗಳು ಯುವ ಪ್ರೇಮಿಗಳು ಮನ ಮಿಡಿಯುವ ಪ್ರೇಮಕಥೆ.
1 min readಯಾದಗಿರಿ: ಮನೆಯವರು ಪ್ರೀತಿಗೆ ಒಪ್ಪಿಲ್ಲವೆಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.
ಅವರು ಇನ್ನೂ ಬಾಳಿ ಬದುಕುಬೇಕಾದವರು. ಜೀವನದ ಬಂಡಿಯನ್ನು ಒಟ್ಟಿಗೆ ನೂಕಬೇಕಾದ ಪುಟ್ಟಜೋಡಿ. ಆದರೆ ಆ ಯುವ ಪ್ರೇಮಿಗಳ ಪ್ರೀತಿಗೆ ಮನೆಯವರ ಒಪ್ಪಿಗೆ ಸಿಕ್ಕಿರಲಿಲ್ಲ. ಪೋಷಕರ ಅಡ್ಡಿಯಿಂದ ಪ್ರೇಮಿಗಳು ಬೇಸತ್ತಿದ್ದರು. ನಮಗಿನ್ನೂ ಮನೆಯವರು ಒಂದಾಗಲು ಬಿಡುವುದಿಲ್ಲ , ಎಂಬುದು ಪ್ರೇಮಿಗಳ ಮನದಲ್ಲಿ ಮನೆಮಾಡಿತ್ತು. ಯುವಪ್ರೇಮಿಗಳ ಕಳವಳ ಅದೊಂದು ಕರಾಳ ತೀರ್ಮಾನಕ್ಕೆ ಬರುವಂತೆ ಮಾಡಿತ್ತು. ಎರಡು ಮನೆಯಲ್ಲಿ ಬೆಳಗಬೇಕಾದ ದೀಪವೇ ಹಾರಿ ಹೋಗಿತ್ತು.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಪ್ರೇಯಸಿಯನ್ನು ಅಪ್ಪಿಕೊಂಡ ಹುಡುಗ , ಸ್ವಾರಿ ಅಮ್ಮ ನನ್ನಿಂದ ತಪ್ಪಾಗ್ತಿದೆ . ಇನ್ನೊಂದು ಜನ್ಮವಿದ್ದರೆ ಖಂಡಿತ ನಿಮ್ಮ ಋಣ ತೀರಿಸುತ್ತೇನೆ. ಎಲ್ರೂನು ಬಿಟ್ಟು ಹೋಗುತ್ತಿದ್ದೇನೆ. ಐ ಮಿಸ್ ಯು ಆಲ್ ಎಂದು ಕಣ್ಣೀರಿಡುವ ವಿಡಿಯೋ ಮನಮುಟ್ಟುವಂತಿದೆ.
ಹೀಗೆ ಮುದ್ದಾಗಿ ಕಾಣುತ್ತಿರುವ ಈ ಯುವಜೋಡಿಯ ಹೆಸರು ಹಣಂಮತಪ್ಪ (21) , ಮಹಾದೇವಿ (17) . ಯಾದಗಿರಿ ಜಿಲ್ಲೆ ಯಾದಗಿರಿ ತಾಲೂಕಿನ ಗೊಂದಡಗಿ ಗ್ರಾಮದವರು.
ಇವರಿಬ್ಬರಿಗೂ ಕಳೆದ ಎರಡು ವರ್ಷದಿಂದ ಪ್ರೇಮಾಂಕುರವಾಗಿತ್ತು. ಈ ಪುಟ್ಟ ಪ್ರೇಮಿಗಳು ತಮ್ಮ ಪ್ರೀತಿಯೇ ಪ್ರಪಂಚ ಎಂದು ನಂಬಿದ್ದರು. ಆದರೆ ಅಲ್ಲಿ ನಡೆಯಬಾರದ ವಿಧಿಯಾಟ ನಡೆದೇ ಹೋಯಿತು.
ಹೌದು ಕಳೆದ ಒಂದು ವಾರದ ಹಿಂದೆ ಇವರ ಪ್ರೀತಿಯ ವಿಷಯ ಮಹಾದೇವಿ ಅವರ ಕುಟುಂಬಕ್ಕೆ ತಿಳಿದಿದೆ. ಇದೊಂದು ದೊಡ್ಡ ರಾದ್ಧಾಂತಕ್ಕೆ ಕಾರಣವಾಯಿತು.
ಯುವ ಪ್ರೇಮಿಗಳು ಅನ್ಯಜಾತಿಯ ವರಾಗಿದ್ದಾರೆ. ಹುಡುಗೀಯ ಕುಟುಂಬದವರು , ಆ ಹುಡುಗನಿಗೆ ಪ್ರೀತಿಸುವುದನ್ನು ನಿಲ್ಲಿಸುವಂತೆ ಒತ್ತಾಯ ಮಾಡಿದ್ದರು.
ಯಾವಾಗ ಮನೆಯವರ ಕಿರಿಕಿರಿ ಪ್ರೇಮಿಗಳ ಮೇಲೆ ಹೆಚ್ಚಾಯಿತೋ ಇಬ್ಬರು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿಯೇ ಬಿಟ್ಟರು.
ಹೀಗಾಗಿ ಗ್ರಾಮದ ಹೊರವಲಯದಲ್ಲಿರುವ ಕಲ್ಯಾಣಿಗೆ ಬಿದ್ದು ಇವರಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರ ಮೃತ ದೇಹಗಳು ನೀರಿನಲ್ಲಿ ತೇಲಿದಾಗ ಆತ್ಮಹತ್ಯೆ ವಿಚಾರ ಬಹಿರಂಗಗೊಂಡಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
:- ಬಾಳಿ ಬದುಕಬೇಕಾದ ಈ ಜೀವಗಳು ಸಾವಿನ ಮನೆಯ ಬಾಗಿಲು ತಟ್ಟಿದ್ದಾರೆ. ಸಾವು ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದ್ರೆ , ಈ ಭೂಮಿ ಮೇಲೆ ಈ ಮನುಷ್ಯ ಅನ್ನೋ ಜೀವಿಯೇ ಇರುತ್ತಿರಲಿಲ್ಲ. ಏನೇ ಆಗಲಿ ಬದುಕಿನಲ್ಲಿ ಈಜಬೇಕು ಇದ್ದೂ ಜಯಿಸಬೇಕು . ಚಿಕ್ಕವಯಸ್ಸಿನಲ್ಲಿಯೇ ಸಾವಿನ ಮನೆ ಸೇರಿದ ಜೀವಗಳ ಆತ್ಮಕ್ಕೆ ಶಾಂತಿ ಸಿಗಲಿ.