ಮಹಾನ್ ಸಂತರಾಗಿ ಕನಕದಾಸರ ಕೊಡುಗೆ ಅಪಾರ
1 min readಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸಂತ ಶ್ರೇಷ್ಠ ಕನಕ ದಾಸರ ಜಯಂತಿ ಆಚರಣೆ ಮಾಡಲಾಯಿತು.
ಇಂದು ಚಿತ್ರದುರ್ಗ ಜಿಲ್ಲಾ ಪಂಚಾಯತ್ ಕಛೇರಿ ಸಭಾಂಗಣದಲ್ಲಿ ಆಯೋಜಿಸಿದ್ದ 533ನೆ ಕನಕ ಜಯಂತಿ ಆಚರಣೆ ನಡೆಸಲಾಯಿತು.
ಕೋವಿಡ್ 19 ಹಿನಲೆಯಲ್ಲಿ ಜಿಲ್ಲಾಡಳಿತದ ಆದೇಶದ ಪ್ರಕಾರ ಸರಳವಾಗಿ ದಾಸಶ್ರೇಷ್ಠ ಕನಕ ಜಯಂತಿಯನ್ನು ಫೋಟೋಗೆ ಮಾಲಾರ್ಪಣೆ ಮಾಡುವ ಮೂಲಕ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಹಮ್ಮದ್ ಮುಬೀನ್ ರವರು ಅರ್ಥಪೂರ್ಣವಾಗಿ ಕನಕ ದಾಸರ ಪದಗಳುನ್ನುರಚಿಸಿ ಅವರು ವರಕವಿ ಹಲವಾರು ಮಹಾನ್ ಗ್ರಂಥಗಳುನ್ನೂ ರಚಿಸಿದ್ದಾರೆ ಎಂದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ನಿರ್ದೇಶಕ ಎಮ್ಮೆಹಟ್ಟಿ ಹನುಮಂತಪ್ಪ ಮಾತನಾಡಿ ಕನಕದಾಸರು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದ ಮಹಾನ್ ಸಂತ, ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೇಲೆಯನೆನಾದರು ಬಲ್ಲಿರಾ ಎಂದು ಸಾರುತ್ತಾ ರಾಜ್ಯದ ಜನತೆಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಚರಿಸಿ ದಾಸ ಶ್ರೇಷ್ಠ ರಾದರುಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಕುಡಿಯುವ ನೀರು ಸರಬರಾಜು ಇಲಾಖೆಯ ಶಿವಮೂರ್ತಿ ,ಕೃಷ್ಣಪ್ಪ, ಜಿಲ್ಲಾ ಪಂಚಾಯತ್ ಪರಿಷತ್ ಶಾಖೆಯ ನಾಗರಾಜ್, ಆನಂದ್. ಬದ್ರಿನಾಥ್, ಕರಿಯಪ್ಪ, ಅಂಗವಿಕಲರ ಇಲಾಖೆಯ ಕಲ್ಯಾಣ ಅಧಿಕಾರಿ ಗಳಾದ ವೈಶಾಲಿ ಮತ್ತು ಸಿಬಂದಿ ವರ್ಗದವರು ಹಾಜರಿದ್ದರು.