February 26, 2024

Chitradurga hoysala

Kannada news portal

ವಿಧಿಯಾಟಕ್ಕೆ ಜೀವನದ ಪಯಣ ಮುಗಿಸಿದ ವಿನಯ್

1 min read

ಅಯ್ಯೋ ವಿಧಿ ನೀನೆಷ್ಟು ಕ್ರೂರಿ… ಕಳೆದ ನವೆಂಬರ್ 29 ರಂದು ವಿವಾಹವಾಗಿದ್ದ ವಿನಯ್ ಕುಮಾರ್ ಉಸಿರಾಟ ತೊಂದರೆಯಿಂದ ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ.

ಎಲ್ಲರೊಂದಿಗೆ ಸ್ನೇಹ ಜೀವಿಯಾಗಿದ್ದ ಅವರು ಮದುವೆಯಾಗಿ ಬರೀ ಹತ್ತು ದಿನ ಕಳೆದಿತ್ತು. ಬುಧವಾರ ಬೆಳಗಿನ ಜಾವ ಇಹಲೋಕ ತೆಜಿಸಿದ್ದಾರೆ. ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದ ಮಂಗಳವಾರ ರಾತ್ರಿ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಸಿಟಿ ಸೆಂಟ್ರಲ್ ಹಾಸ್ಪಿಟಲ್ ಗೆ ತಡರಾತ್ರಿ ಒಂದುಗಂಟೆಗೆ ಕಳುಹಿಸಲಾಗಿತ್ತು. ಕ್ರೂರ ವಿಧಿಯು ಕಡೆಗೂ ಬಿಡದೆ ಬೆನ್ನತ್ತೇ ಇಹಲೋಕಕ್ಕೆ ಕರೆದು ಕೊಂಡು ಹೋಗಿದೆ ಇನ್ನೂ ದಾಂಪತ್ಯ ಜೀವನದ ಕನಸು ಹೊತ್ತು ಬಾಳಸಂಗಾತಿಯಾಗಿ ಕೈಹಿಡಿದಿದ್ದ ಆ ಹೆಣ್ಣು ಮಗುವಿಗೆ ದೇವರೇ ದಿಕ್ಕು ಎನ್ನುವಂತಾಗಿದೆ.
ಮೃತರು ಚಿತ್ರದುರ್ಗ ತಾಲೂಕಿನ ಅನ್ನೇಹಾಳ್ ಗ್ರಾಮದವರಾಗಿದ್ದು ಚಿತ್ರದುರ್ಗ ದವಳಗಿರಿ ಬಡವಾಣೆಯಲ್ಲಿ ವಾಸವಾಗಿದ್ದರು.
ಚಿತ್ರದುರ್ಗ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರಲ್ಲದೆ ಪ್ರಸ್ತುತ ರಾಜ್ ಟಿವಿ ಕ್ಯಾಮೆರಾ ಮ್ಯಾನ್ ಆಗಿ ಕಾರ್ಯನಿರ್ವ ಹಿಸುತ್ತಿದ್ದರು. ಈ ಹಿಂದೆ ಉದಯ ಟಿ.ವಿ , ಚಿತ್ರದುರ್ಗ ಸಿಟಿ ಕೇಬಲ್ , ಕ್ಯಾಮೆರಾ ಮೆನ್ ಆಗಿ ಕಾರ್ಯ ನಿರ್ವಹಿಸಿದ್ದರು.

About The Author

Leave a Reply

Your email address will not be published. Required fields are marked *