April 28, 2024

Chitradurga hoysala

Kannada news portal

ರಸ್ತೆ ಪೂರ್ತಿ ಕಿತ್ತು ಹೋಗಿದೆ, ಯಾರ ಮಾಡಿಸಬೇಕು ಪಿಎನ್ ಸಿ ಕಂಪನಿ ವಿರುದ್ದ ಶಾಸಕ ತಿಪ್ಪಾರೆಡ್ಡಿ ಕಿಡಿ.

1 min read

ಚಿತ್ರದುರ್ಗ: ಯಾವನ್ ನಿನಗೆ ಪರ್ಮಿಷನ್ ಕೊಟ್ಟಿದ್ದು ,ರಸ್ತೆ ಮಾಡಲು 3 ಕೋಟಿ ಬೇಕು ಯಾರ ಕೊಡತ್ತಾರೋ, ಮೂರು ತಿಂಗಳಾಗಿಲ್ಲ ರಸ್ತೆ ಬಿಲ್ ಆಗಿಲ್ಲ ರಸ್ತೆ ಹಾಳಾಗಿದೆ ಯಾವನ್ ಮಾಡಿಸುತ್ತಾನೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರನ ವಿರುದ್ದ ಗುಡುಗಿದರು.

ತಾಲೂಕಿನ ಇಂಗಳದಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಗಳದಾಳ್ , ಕಾಪರ್ ಮೈನ್ಸ್, ಲಂಬಾಣಿಹಟ್ಟಿ, ಮಾರ್ಗವಾಗಿ ಲಂಬಾಣಿಹಟ್ಟಿಯಿಂದ ರಾಷ್ಟ್ರೀಯ ಹೆದ್ದಾರಿಗೆ ನಿತ್ಯ 50-60 ಟನ್ ಮಣ್ಣಿನ ಲಾರಿ ಚಲಿಸಿ ರಸ್ತೆಯ ಸ್ಥಿತಿ ಅಯೋಮಾಯವಾಗಿದೆ. ಇದಕ್ಕೆ ಶಾಸಕರು ಅನೇಕ ಬಾರಿ ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ ಯಾವುದೇ ಪ್ರಯೋಜನ ಆಗದ ಕಾರಣ ಇಂದು ಇಂಗಳದಾಳ್ ಸುತ್ತಮುತ್ತಲಿನ ಪ್ರದೇಶದ ರಸ್ತೆಗಳ ಪರಿಶೀಲನೆಗೆ ಡಿಎಂಎ ಅಧಿಕಾರಿ, ಪೋಲಿಸ್ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಡಿಎಂಎ ಅಧಿಕಾರಿಗಳ ವಿರುದ್ದ ಹರಿ ಹಾಯ್ದರು. ನೀವು ಆಫೀಸ್ ಲ್ಲಿ ಕುಳಿತಿಕೊಂಡು ಪರ್ಮಿಷನ್ ಕೊಟ್ಟರೆ ಇಲ್ಲಿ 10-15 ಟನ್ ಒಡಾಡುವ ಗ್ರಾಮೀಣ ರಸ್ತೆಯಲ್ಲಿ 50-60 ಲಾರಿ ಚಲಿಸಿದರೆ ಕೊಟ್ಯಾಂತರ ಹಣ ನೀಡಿ ಮಾಡಿದ ರಸ್ತೆ ಹೀಗಾಗಿದೆ ಎಂದು ಡಿಎಂಎ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಅದಕ್ಕೆ ನಾವು ಪರ್ಮಿಷನ್ ನೀಡಿಲ್ಲ ಎಂದರು. ತಹಶಿಲ್ದಾರ ಸಹ ನಾವು ಪರ್ಮಿಷನ್ ನೀಡಿಲ್ಲ ಎಂದರು. ಇದಕ್ಕೆ ರೇಗಿದ ಶಾಸಕರು ನೀವು ಎಲ್ಲಿ ಏನು ನಡೆಯುತ್ತಿದೆ ಎಂಬ ಮಾಹಿತಿ ತೆಗೆದುಕೊಳ್ಳಿ ಸರ್ಕಾರಕ್ಕೆ ಇವರಿಂದ ಸ್ವಲ್ಪ ಪ್ರಮಾಣದಲ್ಲಿ ಹಣ ಬರತ್ತದೆ. ಆದರೆ ಅದರ 100 ಪಟ್ಟು ಹೆಚ್ಚಿನ ಹಣದಲ್ಲಿ ಮಾಡಿದ ರಸ್ತೆಯ ಸ್ಥಿತಿ ಏನು ನಾನು ಹೇಗೆ ಹಣ ಮತ್ತೆ ಒದಗಿಸಬೇಕು ಎಂದು ತಿಳಿಸಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇವರು ಕಾನೂನು ವಿರುದ್ದ ಮಣ್ಣು ಒಡೆದಿದ್ದಕ್ಕೆ ಕೇಸ್ ಮಾಡಿ ನಷ್ಟದ ಹಣ ಬರಿಸುವಂತೆ ಮಾಡಿ ಎಲ್ಲಾಮಣ್ಣು ತುಂಬುವ ಲಾರಿಗಳನ್ನು ಇಂದೇ ಸ್ಟಾಪ್ ಮಾಡಿ. ಮಣ್ಣು ಒಡೆಯಲು ನನ್ನ ಅಭ್ಯಂತರವಿಲ್ಲ. ಗ್ರಾಮೀಣ ಭಾಗ ಮತ್ತು ನಗರದಲ್ಲಿ 10 ಟನ್ ಮಾತ್ರ ತುಂಬಿ ಮಣ್ಣು ಒಡೆಯಲು ಸೂಕ್ತ ಕ್ರಮ ವಹಿಸಬೇಕು ಇಲ್ಲದಿದ್ದರೆ ರಸ್ತೆಗೆ ಹಣ ಮಾಡಲು ಹಣವಿಲ್ಲ. ಇಂತಹ ಕೋವಿಡ್ ಸಂದರ್ಭದಲ್ಲಿ ಹಣವಿಲ್ಲದ ಕಾಲದಲ್ಲಿ ನಮ್ಮ ಸ್ಥಿತಿ ಏನು, ಎಲ್ಲಾರಂತ ಶಾಸಕ ನಾನಲ್ಲ , ಜನರಿಗೆ ತೊಂದರೆ ಆದರೆ ಸಹಿಸಲ್ಲ, ಗುಡ್ಡದ ರಂಗನಹಳ್ಳಿ ಭಾಗದಲ್ಲಿ ಸಹ ಮಣ್ಣು ಒಡೆಯುತ್ತಿದ್ದು ಅಲ್ಲಿ ಸಹ ನಿಲ್ಲಿಸಿ ಎಂದರು. ಬಂಗೇರಹಟ್ಟಿ ದೊಡ್ಡಸಿದ್ದವ್ವನಹಳ್ಳಿ ವಿಶೇಷ ಅನುದಾನದಲ್ಲಿ ಆಕ್ಸಿಡೆಂಟ್ ಜೋನ್ ಎಂದು ಪರಿಗಣಿಸಿ 5ಕೋಟಿ ಅನುದಾನದಿಂದ ಮಾಡಿದ ರಸ್ತೆ ಸಹ ಕಿತ್ತು ಹೋಗಿದೆ. ಎಲ್ಲಿ ಅಂತ ಮಾಡಲಿ ನಾನು ರಸ್ತೆ. ನಾನು ಅಭಿವೃದ್ಧಿ ಮಾಡಿದರೆ ನೀವು ಹಾಳು ಮಾಡೊಕೊಂಡು ಬನ್ನಿ ಎಂದು ಪಿಎನ್ ಸಿ ಕಂಪನಿಯ ಗುತ್ತಿಗೆದಾರನ ಪರವಾಗಿ ಬಂದಿದ್ದವರ ವಿರುದ್ದ ಶಾಸಕರಿ ಕೆಂಡಮಂಡಲವಾದರು. ಅಮೃತ ಆರ್ಯವೇದಿಕ್ ಕಾಲೇಜು ಮುಂಭಾಗದ ರಸ್ತೆಯ ವಿಕ್ಷಣೆ ಮಾಡಿದ ಶಾಸಕರು ಎಲ್ಲಾ ಕಡೆ ಮಣ್ಣಿನ ಲಾರಿಗಳ ಹಾವಳಿಯಿಂದ ಈ ರೀತಿ ಆಗಿದೆ. ಇದಕ್ಕೆ ತುರ್ತು ಸಭೆ ಮಾಡಿ ಸೂಕ್ತ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಲಿಂಗರಾಜ್, ಗ್ರಾಮಂತರ ವೃತ್ತ ಪೋಲಿಸ್ ಬಾಲಚಂದ್ರ ನಾಯಕ್, ಪಿಎನ್ ಸಿ ಕಂಪನಿಯ ಚಂದ್ರಶೇಖರ್, ಇಂಗಳದಾಳ್, ಕಾಪರ್ ಮೈನ್ಸ್, ಲಂಬಾಣಿಹಟ್ಟಿ, ಕುರುಮರಡಿಕೆರೆ, ಕೆನ್ನೆಡಲು ಗ್ರಾಮಸ್ಥರು ಇದ್ದರು..

About The Author

Leave a Reply

Your email address will not be published. Required fields are marked *