ಹೊಸ ವರ್ಷಕ್ಕೆ ಸುಕೋ ಬ್ಯಾಂಕ್ ಕ್ಯಾಲೆಂಡರ್ ಬಿಡುಗಡೆ
1 min readಚಿತ್ರದುರ್ಗ , ಜ. 01; ಸುಕೋ ಬ್ಯಾಂಕ್ ಪ್ರತೀ ವರ್ಷವೂ ವಿಶಿಷ್ಟವಾದ ಕ್ಯಾಲೆಂಡರ್ ಪ್ರಕಟ ಮಾಡುತ್ತಿರುವುದು ಬ್ಯಾಂಕ್‌ನ ಕ್ರಿಯಾಶೀಲತೆಯನ್ನು ಪ್ರತಿನಿಧಿಸುತ್ತದೆ ಎಂದು (ಚಿತ್ರದುರ್ಗ ಜಿಲ್ಲಾ ವಾಣಿಜ್ಯೋದ್ಯಮಿಗಳು ಹಾಗು ವರ್ಷ ಅಸೋಸಿಯೇಟ್ ಮಾಲೀಕರಾದ ಶ್ರೀ ರಾಜು ವಿ ಎಸ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುಕೋ ಬ್ಯಾಂಕ್‌ನ ಮುಖ್ಯ ಕಚೇರಿಯಲ್ಲಿ ಶುಕ್ರವಾರ ನಡೆದ `2021ರ ಕ್ಯಾಲೆಂಡರ್’ ಬಿಡುಗಡೆ ಮಾಡಿ ಮಾತನಾಡಿದ ಅವರು, ಸುಕೋ ಬ್ಯಾಂಕ್‌ನ ಕ್ಯಾಲೆಂಡರ್ ಪ್ರತೀ ವರ್ಷವೂ ವಿಭಿನ್ನವಾಗಿ, ವೈವಿಧ್ಯಮಯವಾಗಿ – ವಿಶಿಷ್ಟವಾಗಿ ರೂಪುಗೊಳ್ಳುತ್ತದೆ. ಈ ವರ್ಷದ ಕ್ಯಾಲೆಂಡರ್ ಸೈಬರ್ ಕ್ರೆöÊಂ ಜಾಗೃತಿ ಮೂಡಿಸುತ್ತಿರುವುದು ಪ್ರಸ್ತುತ ಅಗತ್ಯವನ್ನು ತೋರುತ್ತಿದೆ ಎಂದರು.
ಡಾ. ರಾಜೇಶ್ ಎಂ ಎಸ್ CMH ಆಸ್ಪತೆಯ ಮುಖ್ಯಸ್ಥರು ಅವರು ಅತಿಥಿಗಳಾಗಿ ಮಾತನಾಡಿ, `ಕೋವಿಡ್-19’ರ ಸಂದರ್ಭದಲ್ಲಿ ಬ್ಯಾಂಕಿAಗ್ ಸಿಬ್ಬಂದಿಯು ವಾರಿಯರ್‌ಗಳಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಕೋವಿಡ್ ಸವಾಲುಗಳನ್ನು ಎದರಿಸುತ್ತಲೇ ಮಾರುಕಟ್ಟೆ ಮತ್ತು ಗ್ರಾಹಕರ ಅಗತ್ಯಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದರು.ಈ ಸಂದರ್ಭದಲ್ಲಿ ಮತ್ತೋವರ ಅತಿಥಿಯಾದ ಶ್ರೀ ಅರುಣಕುಮಾರ ಪಿ.ವಿ ಇವರು ಉಪಸ್ಥಿಯಲ್ಲಿದ್ದರು.
ಸುಕೋ ಬ್ಯಾಂಕ್‌ನ ನಿರ್ದೇಶಕಿ ಸಾವಿತ್ರಿ ದಾನಗೌಡ್ರು ಕೋವಿಡ್-19'ರ ಸವಾಲಿನ ದಿನಗಳಲ್ಲಿ ಬ್ಯಾಂಕ್ ಪ್ರಾರಂಭಿಸಿದ
ವಿದ್ಯಾಸೇತು’ ಲ್ಯಾಪ್‌ಟಾಪ್ ಸಾಲ ಯೋಜನೆ, ಬೀದಿ ಬದಿ ವ್ಯಾಪಾರಿಗಳಿಗೆ ನೀಡುವ ಸಾಲ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಿ ಪ್ರಸಕ್ತ ವರ್ಷದಲ್ಲಿ ಜೀವನೋಪಾಯ ಸೃಷ್ಟಿಸುವ ಉದಯೋನ್ಮುಖ ವೈದ್ಯರುಗಳಿಗೆ ಆಧುನಿಕ ಸಲಕರಣೆಗಳನ್ನೊಳಗೊಂಡ ಮೊಬೈಲ್ ವೈದ್ಯಕೀಯ ತಪಾಸಣಾ ಕಿಟ್ ಖರೀದಿಗೆ ಮತ್ತು ಉತ್ಸಾಹಿ ಯುವಶಕ್ತಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಟರಿ ರೀಚಾರ್ಜ್ನ ಆಧುನೀಕ ವ್ಯವಸ್ಥೆಯ ಕೇಂದ್ರಗಳನ್ನು ತೆರೆಯಲು ವಿಶೇಷ ಪರಿಸರಸ್ನೇಹಿ ಸಾಲ ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದರು.
ಸುಕೋ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಪರಿಮಳಾಚಾರ್ಯ ಎಸ್. ಅಗ್ನಿಹೋತ್ರಿ ಅವರು, ಸುಕೋ ಬ್ಯಾಂಕ್ ವ್ಯಾಪಾರ, ಸಣ್ಣ ಬಂಡವಾಳ, ದೊಡ್ಡ ವ್ಯಾಪಾರ, ಮನೆ ವೈದ್ಯ, ಆಧುನಿಕ ಕೃಷಿ, ಚಿತ್ರಕಲೆ ಹೀಗೇ ವೈವಿಧ್ಯಮಯ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಜನಪ್ರಿಯ ಕ್ಯಾಲೆಂಡರ್ ಪ್ರಕಟಿಸುತ್ತಿದೆ. ಬ್ಯಾಂಕ್‌ನ ಆಡಳಿತ ಮಂಡಲಿಯು ಈ ವರ್ಷ ಸೈಬರ್ ಕ್ರೆöÊಂ ಜಾಗೃತಿ ಮೂಡಿಸುವ ವಿಷಯವನ್ನು ಆಯ್ಕೆ ಮಾಡಿಕೊಂಡಿದೆ ಎಂದರು.
ಸುಕೋ ಬ್ಯಾಂಕ್‌ನ ಅಸೆಟ್ ಮ್ಯಾನೇಜರ್ ಮಧುಚಂದ್ರ ಕೋಸಗಿ ಅವರು ಸ್ವಾಗತಿಸಿದರು. ಬ್ಯಾಂಕಿನ ಅಧಿಕಾರಿ ಗಾದಿಲಿಂಗಪ್ಪ ಯು ಕಾರ್ಯಕ್ರಮ ನಿರೂಪಿಸಿದರು. ಬ್ಯಾಂಕ್‌ನ ಅಧಿಕಾರಿ ರಂಜಿತಾ ಅವರು ವಂದಿಸಿದರು.