May 17, 2024

Chitradurga hoysala

Kannada news portal

ಭಾರತ ಕಂಡ ಮಹಾನ್ ನಾಯಕ ಸ್ವಾಮಿ ವಿವೇಕನಾಂದರು: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ.

1 min read

ಚಿತ್ರದುರ್ಗ ಜ.೧೦: ಸ್ವಾಮಿ ವಿವೇಕಾನಂದರು ನಮ್ಮ ದೇಶದ ಗೌರವವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಪಾಡಿದ ಮಹಾನ್ ನಾಯಕರಾಗಿದ್ದಾರೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದ್ದಾರೆ.

ಸ್ವಾಮಿ ವಿವೇಕಾನಂದರ ೧೫೮ನೇ ಜನ್ಮ ಜಯಂತಿ ಕಾರ್ಯಕ್ರಮದ ನಿಮಿತ್ತ ಸಮರ್ಥ ಭಾರತ ನೇತೃತ್ವದಲ್ಲಿ ನಗರದ ಶ್ರೀ ನೀಲಕಂಠೇಶ್ವರ ದೇವಸ್ಥಾನದಿಂದ ಡಿಸಿ ವೃತ್ತದವರೆಗೂ ಹಮ್ಮಿಕೊಂಡಿದ್ದ (ವಾಕಥಾನ್) ಪಾದನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚಿಕಾಗೂ ನಗರದಲ್ಲಿ ನಡೆದ ಅಂರತಾಷ್ಟ್ರೀಯ ಧರ್ವ ಸಮ್ಮೇಳನದಲ್ಲಿ ಭಾರತದ ಬಗ್ಗೆ ಮಾಡಿದ ಭಾಷಣ ಐತಿಹಾಸಿಕವಾದ ಭಾಷಣವಾಗಿದೆ. ಅಂದಿನ ದಿನದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಬಗ್ಗೆ ಇದ್ದ ಭಾವನೆಯನ್ನು ಬದಲಾವಣೆ ಮಾಡುವುದರ ಮೂಲಕ ಭಾರತ ಎಂದರೆ ಎಲ್ಲರಿಗೂ ಸಹಾ ಉತ್ತಮವಾದ ಭಾವನೆ ಬರುವ ರೀತಿಯಲ್ಲಿ ಮಾಡಿದ ನಾಯಕರಾಗಿದ್ದಾರೆ ಎಂದು ತಿಳಿಸಿದರು.

ಜ.೧೨ರಂದು ಸ್ವಾಮಿ ವಿವೇಕಾನಂದ ೧೫೮ನೇ ಜನ್ಮ ದಿನಾಚರಣೆಯನ್ನು ಅಚರಣೆ ಮಾಡಲಾಗುತ್ತಿದು ಇದರ ಅಂಗವಾಗಿ ಇಂದು ಶ್ರೀ ನೀಲಕಂಠೇಶ್ವರ ದೇವಸ್ಥಾನದಿಂದ ಡಿಸಿ ವೃತ್ತದವರೆಗೂ ಪಾದನಡಿಗೆಯನ್ನು ನಡೆಸಲಾಗುತ್ತಿದೆ. ಅಂದು ಸ್ವಾಮಿ ವಿವೇಕಾನಂದರು ಮಾಡಿದ ಭಾಷಣ ಐತಿಹಾಸಿಕವಾದ ದಾಖಲೆಯಾಗಿದೆ. ವಿವೇಕಾನಂದರು ನೀಡಿದ ಸಂದೇಶದಲ್ಲಿ ಜನತೆಗೆ ನೀವು ಉತ್ತಮರಾಗಿರಿ, ದೇಶಕ್ಕೆ ಉತ್ತಮವಾದ ಕೆಲಸವನ್ನು ಮಾಡಿ ಸಮರ್ಥವಾದ ಭಾರತವನ್ನು ನಿರ್ಮಾಣ ಮಾಡುವ ಹೊಣೆಗಾರಿಕೆ ಯುವಜನತೆಯ ಮೇಲಿದೆ ಇದನ್ನು ಚನ್ನಾಗಿ ತಿಳಿಯಬೇಕಿದೆ ಎಂದು ಶಾಸಕ ತಿಪ್ಪಾರೆಡ್ಡಿ ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ನಗರದ ನೀಲಕಂಠೇಶ್ವರ ದೇವಾಲಯದಿಂದ ಜಿಲ್ಲಾಧಿಕಾರಿಗಳ ಕಚೇರಿ ವೃತ್ತದವರೆಗೂ ಯುವಜನತೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದು ದಾರಿಯುದ್ದಕ್ಕೂ ವಿವೇಕಾನಂದವರ ಬಗ್ಗೆ ಜಯ ಘೋಷಗಳನ್ನು ಹಾಕುತ್ತಾ ಸಾಗುತ್ತಿದ್ದು ಕೈಯಲ್ಲಿ ಸ್ವಾಮಿ ವಿವೇಕಾನಂದ ಸಂದೇಶವನ್ನು ಸಾರುವ ಭಿತ್ತಿ ಪತ್ರಗಳು ಕಂಡು ಬಂದವು ಜಿಲ್ಲಾಧಿಕಾರಿಗಳ ಕಚೇರಿ ವೃತ್ತದ ಬಳಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ನಗರಾಭೀವೃದ್ದಿ ಪ್ರಾದಿಕಾರ ಅಧ್ಯಕ್ಷ ಬದರಿನಾಥ್, ಬಿಜೆಪಿಯ ಯುವ ಮೋರ್ಚಾದ ಹನುಮಂತೇಗೌಡ ವಕ್ತಾರ ನಾಗರಾಜ್ ಬೇದ್ರೇ, ಶಿವಣ್ಣಾಚಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *