2 A ಮೀಸಲಾತಿ ಪತ್ರ ಬರುವವರೆಗೂ ಪೀಠಕ್ಕೆ ವಾಪಸ್ ಹೋಗಲ್ಲ: ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ
1 min readಹಿರಿಯೂರು: ಮುಖ್ಯಮಂತ್ರಿಗಳೇ ನಿಮಗೆ ಮನಸ್ಸು ಮಾಡಿದರೆ ಏನು ಬೇಕಾದರೂ ಪಡೆದುಕೊಳ್ಳುವ ಸಾಧ್ಯತೆ ಇದೆ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ.
ತಾಲೂಕಿನ ಹಿರಿಯೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಮುಖ್ಯಮಂತ್ರಿಗಳು ಹಿಂದುಳಿದ ವರ್ಗಕ್ಕೆ ಮನವಿ ಮಾಡಿ, ಆದಷ್ಟು ವರದಿ ತರಿಸುವ ಪ್ರಯತ್ನ ಮಾಡಿ ಎಂದರು.
ನಾವು ಗಟ್ಟಿ ತೀರ್ಮಾನ ಮಾಡಿದ್ದೇವೆ. 2A ಮೀಸಲಾತಿ ಆದೇಶ ಪತ್ರ ಬಂದ ನಂತರ ಪೀಠಕ್ಕೆ ವಾಪಸ್ ಹೋಗುತ್ತೇವೆ ಎಂದು ಎಚ್ಚರಿಕೆ ರವಾನಿಸಿದರು. ನೀವು ಬನ್ನಿ, ನಿಮ್ಮ ಜೊತೆ ಮಾತುಕತೆ ಮಾಡುತ್ತೇವೆ.
ಕ್ಯಾಬಿನೆಟ್ ನಲ್ಲಿ ನಿರ್ಣಯ ಮಾಡಿ, ಗೆಜೆಟ್ ಮಾಡಿ ರಾಜ್ಯದ ಡಿಸಿ ಕಚೇರಿಯಲ್ಲಿ ೨ಎ ಮೀಸಲಾತಿ ಪ್ರಮಾಣ ಪತ್ರ ಕೊಡಲು ಆದೇಶ ಮಾಡಬೇಕು. ಎಂದು ಆಗ್ರಹಿಸಿದರು.
ಮೀಸಲಾತಿ ಪತ್ರ ಕೊಡುವವರೆಗೂ ಕೂಡಲ ಸಂಗಮ ಪಂಚಮಸಾಲಿ ಪೀಠಕ್ಕೆ ನಾನು ಹೋಗಲ್ಲ. ಅದಷ್ಟು ತುರ್ತಾಗಿ ಮುಖ್ಯಮಂತ್ರಿ ತೀರ್ಮಾನ ತೆಗೆದುಕೊಳ್ಳಲಿ ಎಂದು ಶ್ರೀಗಳ ಮನವಿ ಮಾಡಿದರು.
ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಇಂದು ಸಂಜೆ 6 ಗಂಟೆಗೆ ನಮ್ಮ ಹಾಲಿ ಸಚಿವರು, ಶಾಸಕರು, ಮಾಜಿ ಶಾಸಕರ ಸಭೆ ಕರೆದಿದ್ದೇವೆ.
ಜನಕ್ಕೆ ನಾನು ಮಾತು ಕೊಟ್ಟು ಬಂದಿದ್ದೇನೆ. ನಿಯೋಗ ಬಂದು ಮಾತುಕತೆ ಮಾಡಿದ್ದರ ಕುರಿತು ಚರ್ಚೆ ಮಾಡುತ್ತೇವೆ. ವಿಧಾನ ಸೌಧ ಮುತ್ತಿಗೆ 15 ರಂದು ಎಂದು ತೀರ್ಮಾನ ಮಾಡಿ ೨ಎ ಮೀಸಲಾತಿ ತಂದೆ ತರುತ್ತೇನೆ ಎಂದು ಭರವಸೆ ನೀಡಿದ್ದೇನೆ ಎಂದರು.
ವರದಿ ಬಂದ ಬಳಿಕ ವಿಳಂಬವಾದರೆ ಯಾವ ರೀತಿಯ ಹೋರಾಟ ಮಾಡಬೇಕು ಎಂದು ಚರ್ಚೆ ಮಾಡುತ್ತೇವೆ.
ಸಚಿವರಾದ ಮುರುಗೇಶ್ ನಿರಾಣಿ, ಸಿಸಿ ಪಾಟೀಲ್, ಬಸವನಗೌಡ ಪಾಟೀಲ್ ಯತ್ನಾಳ್ ಸೇರಿ ಹಲವರು ಆಗಮಿಸುತ್ತಾರೆ.
ಸರ್ಕಾರದಿಂದ ಮತ್ತೊಂದು ಸಂದೇಶ ತರುವ ನಿರೀಕ್ಷೆಯಲ್ಲಿ ನಾವಿದ್ದೇವೆ.ಇಂದು ಸಚಿವರು ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಸಾಧ್ಯತೆ ಇದೆ.