ನಿರ್ಮಾಲಾ ಸೀತಾರಾಮನ್ ಲೆಕ್ಕದಲ್ಲಿ ಮಾತ್ರ ಹೆಚ್ಚಳ ಇಲ್ಲ. ಇಂದು ಮತ್ತೆ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳ
1 min readನವದೆಹಲಿ:5.2.2021: ಕಳೆದ ಅನೇಕ ತಿಂಗಳುಗಳಿಂದ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ತಲಾ 37 ಪೈಸೆ ಏರಿಕೆ ಮಾಡಲಾಗಿತ್ತು. ಫೆಬ್ರವರಿಯಲ್ಲಿ ಈಗ ನಿನ್ನೆಯಿಂದ ಮತ್ತೆ ಬೆಲೆ ಏರಿಕೆ ಮಾಡಲಾಗಿದೆ. ಈಗ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ 37 ಪೈಸೆ ಹೆಚ್ಚಳ ಮಾಡಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವುದು ಸಾಮಾನ್ಯ, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸುವುದು ಸಾಮಾನ್ಯವಾದ ಸಂಗತಿ. ಬಹಳ ಹಿಂದಿನಿಂದಲೂ ಇದು ನಡೆದುಕೊಂಡ ಬಂದಿರುವ ರೀತಿ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಸಂಪ್ರದಾಯವನನ್ನು ಮರೆತಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ ಸಹ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿರಂತರವಾಗಿ ಹೆಚ್ಚಳ ಮಾಡುತ್ತಲೇ ಬರುತ್ತಿದೆ. ಸಾರ್ವಜನಿಕರು ಸಹ ಸರ್ಕಾರದ ನಡೆಯ ಬಗ್ಗೆ ಚಕಾರ ಎತ್ತುತ್ತಿಲ್ಲ ಕಳೆದ ಅನೇಕ ಸರ್ಕಾರಗಳು ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ನಿಗದಿ ಮಾಡಿರುತ್ತಿತ್ತು. ಆದರೆ ಈ ಸರ್ಕಾರದಲ್ಲಿ ನಿತ್ಯವು ಸಹ ಮಾರುಕಟ್ಟೆ ಧರ ಬದಲಾವಣೆ ನೆಪ ಮಾಡಿ ಪೈಸೆಗಳ ಲೆಕ್ಕದಲ್ಲಿ ಹೆಚ್ಚಳ ಮಾಡುತ್ತ ಶತಕದ ಹಂಚಿನಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬಂದು ನಿಂತಿರುವುದು. ಸಾರ್ವಜನಿಕರ ಅಕ್ರೋಶಕ್ಕೆ ಗುರಿಯಾಗಿದೆ.ಇನ್ನಾದರೂ ಸಹ ಸಾರ್ವಜನಿಕರ ಪರವಾದ ನಿಲುವುಗಳು ತೆಗೆದುಕೊಳ್ಳತ್ತ ಎಂಬುದನ್ನು ಕಾದು ನೋಡಬೇಕಾಗಿದೆ.
ದೇಶದ ವಿವಿಧ ನಗರಗಳಲ್ಲಿನ ಪೆಟ್ರೋಲ್ -ಡೀಸೆಲ್ ಬೆಲೆ:
ಬೆಂಗಳೂರು- ಪೆಟ್ರೋಲ್ 89.85 ರೂ., ಡೀಸೆಲ್ 81.76 ರೂ.
ಭೂಪಾಲ್- ಪೆಟ್ರೋಲ್ 94.85 ರೂ., ಡೀಸೆಲ್ 85.14 ರೂ.
ಮುಂಬೈ- ಪೆಟ್ರೋಲ್ 93.49 ರೂ., ಡೀಸೆಲ್ 83.99 ರೂ.
ಜೈಪುರ – ಪೆಟ್ರೋಲ್ 93.26 ರೂ., ಡೀಸೆಲ್ 85.30 ರೂ.
ಪಾಟ್ನಾ- ಪೆಟ್ರೋಲ್ 89.40 ರೂ., ಡೀಸೆಲ್ 82.31 ರೂ.
ಚೆನ್ನೈ- ಪೆಟ್ರೋಲ್ 89.39 ರೂ., ಡೀಸೆಲ್ 82.33 ರೂ.
ಕೋಲ್ಕತ್ತಾ- ಪೆಟ್ರೋಲ್ 88.30 ರೂ., ಡೀಸೆಲ್ 80.71 ರೂ.
ದೆಹಲಿ- ಪೆಟ್ರೋಲ್ 86.95 ರೂ., ಡೀಸೆಲ್ 77.13 ರೂ.
ಲಕ್ನೋ- ಪೆಟ್ರೋಲ್ 86.08 ರೂ., ಡೀಸೆಲ್ 77.49 ರೂ.
ನೋಯ್ಡಾ- ಪೆಟ್ರೋಲ್ 85.91 ರೂ., ಡೀಸೆಲ್ 77.24 ರೂ.
ರಾಂಚಿ- ಪೆಟ್ರೋಲ್ 85.30 ರೂ., ಡೀಸೆಲ್ 81.59 ರೂ.
ಗುರುಗಾವ್ – ಪೆಟ್ರೋಲ್ 85.07 ರೂ., ಡೀಸೆಲ್ 77.86 ರೂ.