ಹಿರಿಯ ಪತ್ರಕರ್ತರಾದ ಮುರುಗೇಶ್ ಅವರು ಉತ್ತಮ ಸ್ನೇಹಜೀವಿ
1 min readಚಿತ್ರದುರ್ಗ:ದಿ.ಮುರುಗೇಶ್ ಅವರು ಜಿಲ್ಲಾ ಪತ್ರಕರ್ತ ಸಂಘಕ್ಕೆ ಮತ್ತು ಸಹೋದ್ಯೋಗಿಗಳಿಗೆ ಉತ್ತಮ ಮಾರ್ಗದರ್ಶಕರಾಗಿದ್ದ ಎಂದು ಹಿರಿಯ ಪತ್ರಕರ್ತ ಟಿ.ಕೆ.ಬಸವರಾಜ್ ಸ್ಮರಿಸಿದರು.
ನಗರದ ಪತ್ರಿಕಾ ಭವನದಲ್ಲಿ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ವತಿಯಿಂದ ಹಿರಿಯ ಪತ್ರಕರ್ತರಾದ ದಿ. ಹೆಚ್.ಕೆ.ಮುರುಗೇಶರವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಪತ್ರಕರ್ತರ ಸ್ಥಳಕ್ಕೆ ಮತ್ತು ಕಟ್ಟಡಗಳ ನಿರ್ಮಾಣಕ್ಕೆ ಮುರುಗೇಶ್ ಅವರು ಸಾಕಷ್ಟು ಶ್ರಮಿಸುದರು. ಅವರ ಸಹಕಾರದಿಂದ ಅತ್ಯಂತ ತುರ್ತಾಗಿ ಪತ್ರಿಕಾ ಸಂಘ ಬೆಳೆಯಲು ಸಹಾಯವಾಯಿತು. ನನಗೆ ಉತ್ತಮ ಮಿತ್ರನನ್ನು ಕಳೆದುಕೊಂಡೆವು ಎಂದು ನೆನಪಿಸಿಕೊಂಡರು.
ಹಿರಿಯ ಪತ್ರಕರ್ತ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿ ಮುರುಗೇಶ್ ಅವರು ಜಿಲ್ಲಾ ಮಾಧ್ಯಮ ಪ್ರಶಸ್ತಿ ಮತ್ತು ರಾಷ್ಟ್ರೀ ಪ್ರಶಸ್ತಿ ಪಡೆದಿದ್ದಾರೆ. ಪತ್ರಕರ್ತರ ಸಂಘಕ್ಕೆ ಉತ್ತಮ ಬುನಾದಿಯನ್ನು ಹಾಕಿದರು ಎಂದರು.
ಪತ್ರಕರ್ತ ಎಂ.ಎನ್.ಆಹೋಬಲಪತಿ ಮಾತನಾಡಿ ದಾವಣಗೆರೆ ,ಶಿವಮೊಗ್ಗ, ಬಳ್ಳಾರಿಯಲ್ಲಿ ಸ್ಥಳೀಯ ಪತ್ರಿಕೆಗಳ ಕಾಲಘಟ್ಟದಲ್ಲಿ ಸ್ಥಳೀಯ ಪತ್ರಿಕೆಗಳನ್ನು ಇನ್ನು ವಿಸ್ತಾರಗೊಳಿಸಬಹುದಿತ್ತು. ಸಂಘಕ್ಕೆ ಅನೇಕ ಕೊಡುಗೆಯನ್ನು ನೀಡಿದ್ದಾರೆ. ಎಲ್ಲಾರ ಕೊಡುಗೆ ಸಹ ಒಂದಲ್ಲ ಒಂದು ರೀತಿ ಇರುತ್ತದೆ.
ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ಗೌಡಗೆರೆ, ಪತ್ರಕರ್ತ ಸಂಘದ ಕುಮಾರಸ್ವಾಮಿ ಮತ್ತು ಎಲ್ಲಾ ಪತ್ರಿಕಾ ಬಳಗದ ಮಿತ್ರರು ಹಾಜರಿದ್ದರು.
.