May 2, 2024

Chitradurga hoysala

Kannada news portal

ಹೊಸ ಮರಳು ನೀತಿ ಜಾರಿ: ಬ್ಯಾಗ್‍ಗಳಲ್ಲಿ ಮರಳು ಮಾರಾಟ. ಸಚಿವ ಎಂ ಆರ್.ನಿರಾಣಿ*

1 min read

ಹೊಸ ಮರಳು ನೀತಿ ಜಾರಿಗೆ

ಬ್ಯಾಗ್‍ಗಳಲ್ಲಿ ಮರಳು ಮಾರಾಟ. ಸಚಿವ ಎಂ ಆರ್.ನಿರಾಣಿ

ಚಿತ್ರದುರ್ಗ,ಜುಲೈ
ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿಗೆ ತರಲಾಗುತ್ತಿದ್ದು, ಇನ್ನೂ ಮುಂದೆ ಬ್ಯಾಗ್‍ಗಳಲ್ಲಿ ಮರಳು ಮಾರಾಟ ಮಾಡಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವರಾದ ಮುರುಗೇಶ್ ಆರ್.ನಿರಾಣಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಕೆಎಂಇಆರ್‍ಸಿಯ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬ್ಯಾಗ್‍ಗಳಲ್ಲಿ ಮರಳು ಮಾರಾಟ ಮಾಡುವುದರಿಂದ ಕೈಗೆಟಕುವ ದರದಲ್ಲಿ ಜನಸಾಮಾನ್ಯರು ಹಾಗೂ ಎಲ್ಲ ವರ್ಗದವರಿಗೂ ಮರಳು ಸಿಗಲಿದೆ. ಮರಳು ಗಣಿಗಾರಿಕೆಯನ್ನು ಕೇವಲ ಆರು ತಿಂಗಳು ಮಾತ್ರ ಮಾಡಬಹುದು. ನದಿಗಳಲ್ಲಿ ನೀರು ಸಂಗ್ರಹಣೆಯಾದರೆ ಮರಳು ತೆಗೆಯಲು ಸಾಧ್ಯವಿಲ್ಲ. ಬ್ಯಾಗ್‍ಗಳಲ್ಲಿ ಮರಳು ಸಂಗ್ರಹಿಸಿದರೆ ವರ್ಷಪೂರ್ತಿ ಮರುಳು ಬಳಕೆ ಮಾಡವ ಯೋಜನೆ ಸಿದ್ದಪಡಿಸಲಾಗಿದೆ ಎಂದು ಹೇಳಿದರು.
ಮರಳು ಬ್ಯಾಗ್‍ಗಳಿಗೆ ಸರ್ಕಾರ ದರ ನಿಗದಿಪಡಿಸಿದ್ದು, ಮರಳು ಬ್ಯಾಗ್‍ಗಳಲ್ಲಿ ಸರ್ಕಾರದ ಲೋಗೊ ಮತ್ತು ಕಂಪನಿ ಹೆಸರು ಇರುತ್ತದೆ. ಪ್ರತಿಯೊಂದು ಬ್ಯಾಗ್ ಕ್ರಮಸಂಖ್ಯೆ ಹೊಂದಿದ್ದು, ಇದರಿಂದ ಇಲಾಖೆಗೆ ಬರುವ ಆದಾಯ ಹೆಚ್ಚಾಗಲಿದ್ದು, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮರಳು ಸರಬರಾಜು ಮಾಡಲು ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಇನ್ಸ್ಟೆಂಟ್ ಮರಳು ಮತ್ತು ಸಿಮೆಂಟ್ ಮಿಕ್ಸ್ ಮಾಡಿ ಗ್ರಾಹಕರಿಗೆ ವಿತರಿಸುವ ಚಿಂತನೆ ಇದೆ ಎಂದರು.
ಕೆಎಂಇಆರ್‍ಸಿಯಿಂದ ಒಟ್ಟು ರೂ.25,000 ಕೋಟಿಯಲ್ಲಿ ರೂ.4500ಕೋಟಿ ರೂ ಚಿತ್ರದುರ್ಗಕ್ಕೆ ವಿವಿಧ ವಲಯಗಳಿಗೆ ಬರುತ್ತದೆ. ಹಾಗಾಗಿ ಸಂಬಂಧಪಟ್ಟ ಯೋಜನೆಗಳ ಕುರಿತಂತೆ ಡಿಪಿಆರ್‍ಗಳನ್ನು ದಾಖಲೆಗಳನ್ನು ಸಿದ್ದಪಡಿಸಲು ಸೂಚನೆ ನೀಡಲಾಗಿದೆ ಎಂದರು.
ಗಣಿ ಮತ್ತು ಭೂ ವಿಜಾÐನ ಇಲಾಖೆಯಲ್ಲಿ ಸರಿಯಾದ ಗಣಿ ಪಾಲಿಸಿ ಇರಲಿಲ್ಲ. ಹಾಗಾಗಿ ಹೊಸ ಗಣಿ ನೀತಿ (2021-26) ಐದು ವರ್ಷಕ್ಕೆ ಜಾರಿಗೆ ಬರುವಂತೆ ಈಗಾಗಲೇ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಮೈನಿಂಗ್ ಅದಾಲತ್: 2000 ಇಸವಿಯಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಂಬಂಧಪಟ್ಟಂತೆ ವಿವಿಧ ಉತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದ 6000 ಅರ್ಜಿಗಳು ಇತ್ಯರ್ಥಗೊಳಿಸಲು ಆಗದೇ ಇಲಾಖೆಯಲ್ಲಿ ಬಾಕಿ ಇದ್ದು, ಇವುಗಳನ್ನು ಇತ್ಯರ್ಥಗೊಳಿಸಲು ಸಿಂಗಲ್ ವಿಂಡೋ ಸಿಸ್ಟಮ್ ಜಾರಿಗೆ ತರಲಾಗುವುದು ಎಂದು ಹೇಳಿದರು.
ಸರ್ಕಾರವೇ ಉದ್ದಿಮೆದಾರರಗೆ ಮನೆಗೆ ಬರುವ ಸಲುವಾಗಿ ಇಲಾಖೆಯ ಪ್ರತಿಯೊಂದು ವಿಭಾಗದಲ್ಲೂ ಗಣಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಬಗೆಹರಿಸಲು ಮೈನಿಂಗ್ ಆದಾಲತ್‍ನ್ನು ಆರಂಭ ಮಾಡಲಾಗುವುದು. ಅವೈಜ್ಞಾನಿಕತೆಯಿಂದ ಮಾಡುವ ಗಣಿಗಾರಿಕೆಯನ್ನು ತಡೆಯಲು ಕಾನೂನೂಬದ್ಧವಾಗಿ ಮತ್ತು ವೈಜ್ಞಾನಿಕವಾಗಿ ಗಣಿಗಾರಿಕೆ ಮಾಡಲು ಬಳ್ಳಾರಿಯಲ್ಲಿ ಸ್ಕೂಲ್ ಆಫ್ ಮೈನಿಂಗ್ ಕೋರ್ಸ್ ಅನ್ನು ಆರಂಭ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಸಿಬ್ಬಂದಿಗೆ ಸಮವಸ್ತ್ರ: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬರುವ ಆಗಸ್ಟ್ 15 ರಿಂದ ಜಾರಿಗೆ ಬರುವಂತೆ ಸಮವಸ್ತ್ರ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಇಲಾಖೆಯ ಅಧಿಕಾರಿಗಳು ಮೈನಿಂಗ್ ಸ್ಥಳಗಳಿಗೆ ಸಿವಿಲ್ ವಸ್ತ್ರದಲ್ಲಿ ಭೇಟಿ ನೀಡುತ್ತಾರೆ. ಇನ್ನೂ ಮುಂದೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಕೆಳಹಂತದ ಸಿಬ್ಬಂದಿಗೂ ಇಲಾಖೆಯಿಂದ ಸಮವಸ್ತ್ರ ಹಾಗೂ ಅವರ ಗ್ರೇಡ್‍ಗೆ ಅನುಗುಣವಾಗಿ ಸ್ಟಾರ್‍ಅನ್ನು ನೀಡಲಾಗುವುದು ಎಂದು ಹೇಳಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದಂತೆ ಚಿತ್ರದುರ್ಗದಲ್ಲಿ ಸ್ವಂತ ಕಟ್ಟಡ ನಿರ್ಮಿಸಲು ಸುಮಾರು ರೂ.2 ಕೋಟಿ ವೆಚ್ಚದಲ್ಲಿ ಖನಿಜ ಭವನವನ್ನು ನಿರ್ಮಿಸಲು ಶೀಘ್ರದಲ್ಲಿ ಭೂಮಿ ಪೂಜೆ ನೆರವೇರಿಸಲಾಗುವುದು. ಒಂದುವರ್ಷದೊಳಗೆ ಖನಿಜ ಭವನ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು. ಈಗಾಗಲೇ ರಾಜ್ಯದ 13 ಜಿಲ್ಲೆಗಳಲ್ಲಿ ಖನಿಜ ಭವನಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೂಳಿದ ಜಿಲ್ಲೆಗಳಲ್ಲೂ ಖನಿಜ ಭವನಗಳನ್ನು ಸ್ಥಾಪನೆ ಮಾಡಲಾಗುವುದು ಎಂದರು.
ರೋಗಗ್ರಸ್ಥ ಗಣಿ ಆರಂಭಕ್ಕೆ ಕ್ರಮ; ಈಗಾಗಲೇ ನಷ್ಟದಲ್ಲಿದ್ದು ಮುಚ್ಚಲ್ಟಟ್ಟಿರುವ ಹಲವು ಗಣಿಗಳನ್ನು ಆರಂಭಿಸಲು ಚಿಂತಿಸಲಾಗಿದ್ದು ಅದರಲ್ಲಿ ಇಂಗಳದಾಳ್ ತಾಮ್ರಗಣಿ, ಕೋಲಾರ ಚಿನ್ನದ ಗಣಿಯು ಸೇರಿದೆ. ಹಾಗೂ ರಾಜ್ಯದಲ್ಲಿ ಖನಿಜ ಸಂಪತ್ತು ಹೆಚ್ಚಿದ್ದು ಇದು ಯಾವ ಯಾವ ಭಾಗದಲ್ಲಿ ಎಷ್ಟಿದೆ ಎಂದು ತಿಳಿಯಲು ಹೈ ರೆಜೂಲೂಷನ್ ಸರ್ವೆ ಮಾಡಲು ಜಾಗತಿಕ ಟೆಂಡರ್ ಕರೆಯಲು ಉದ್ದೇಶಿಸಲಾಗಿದೆ. ಈ ಮೂಲಕ 2023 ಕ್ಕೆ ಮೈನಿಂಗ್ ಗ್ಲೋಬಲ್ ಹೂಡಿಕೆದಾರರ ಸಮಾವೇಶ ಮಾಡಲು ಉದ್ದೇಶಿಸಲಾಗಿದೆ ಎಂದರು.
ಸಭೆಯಲ್ಲಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಪೂರ್ಣಿಮಾ ಕೆ.ಶ್ರೀನಿವಾಸ್, ಟಿ.ರಘುಮೂರ್ತಿ, ಕೆಎಂಇಆರ್‍ಸಿ ಪ್ರಧಾನ ಕಾರ್ಯದರ್ಶಿ ಪಿ.ಸಿ.ರೇ, ನಿರ್ದೇಶಕ ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ,

About The Author

Leave a Reply

Your email address will not be published. Required fields are marked *