April 26, 2024

Chitradurga hoysala

Kannada news portal

ಈ ವಿಚಾವಾಗಿ ಚಿತ್ರದುರ್ಗ ದ ಶಾಸಕರು ಏನು ಹೇಳುತ್ತಾರೆ ?? ಕಲ್ಯಾಣ ಮಂಟಪದ ಜಾಗವನ್ನು ಮಾತ್ರ ತೆರವುಗೊಳಿಸದೆ ತಾರತಮ್ಯ

1 min read

ಈ ವಿಚಾವಾಗಿ ಚಿತ್ರದುರ್ಗ ದ ಶಾಸಕರು ಏನು ಹೇಳುತ್ತಾರೆ??

ಪಂಚಾಚಾರ್ಯ ಕಲ್ಯಾಣ ಮಂಟಪದ ಜಾಗವನ್ನು ಮಾತ್ರ ತೆರವುಗೊಳಿಸದೆ ತಾರತಮ್ಯ ನಗರಸಭಾ ಸದಸ್ಯ ಜೆ.ಎಸ್.ದೀಪಕ್ ಆರೋಪಿಸಿದ್ದಾರೆ.

ಚಿತ್ರದುರ್ಗ:
ಚಿತ್ರದುರ್ಗ ನಗರದ ಬಿ.ಡಿ.ರಸ್ತೆಯ ಪಂಚಾಚಾರ್ಯ ಕಲ್ಯಾಣ ಮಂಟಪದ ಮುಂಭಾಗವನ್ನು ತೆರವುಗೊಳಿಸದೆ ಅಧಿಕಾರಿಗಳು ಒತ್ತಡ ಮತ್ತು ಆಮಿಷಗಳಿಗೆ ಬಲಿಯಾಗಿರುವ ಸಾಧ್ಯತೆ ಇದ್ದು ಕೂಡಲೇ ಒತ್ತುವರಿ ಕಟ್ಟಡ ತೆರವುಗೊಳಿಸಿ ಪಾದಚಾರಿಗಳಿಗೆ ಅನುಕೂಲಕ ಮಾಡಿಕೊಡುವಂತೆ 31ನೇ ವಾರ್ಡಿನ ನಗರಸಭಾ ಸದಸ್ಯ ಜೆ.ಎಸ್.ದೀಪಕ್ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿ ಒತ್ತಾಯಿಸಿದ್ದಾರೆ.
ಚಿತ್ರದುರ್ಗ ನಗರದ ಪಂಚಾಚಾರ್ಯ ಕಲ್ಯಾಣ ಮಂಟಪವು ನಾನು ಪ್ರತಿನಿಧಿಸುವ ವಾರ್ಡ್ ನಂ.31ರ ವ್ಯಾಪ್ತಿಯಲ್ಲಿ ಬರಲಿದ್ದು, ಸದರಿ ಕಲ್ಯಾಣ ಮಂಟಪದ ಕಟ್ಟಡದ ಮುಂಭಾಗವನ್ನು ಬಿ.ಡಿ.ರಸ್ತೆಯ ಅಗಲೀಕರಣದ ಸಂದರ್ಭದಲ್ಲಿ ತೆರವುಗೊಳಿಸಿಲ್ಲ, ಸಂಬಂಧಿಸಿದ ಇಲಾಖೆಯು ಆ ರಸ್ತೆಯ ಎಲ್ಲಾ ಕಟ್ಟಡಗಳಿಗೂ ರಸ್ತೆಗೆ ಎಷ್ಟು ಭಾಗ ಕಟ್ಟಡವು ಹೋಗುವುದೆಂದು ಮಾರ್ಕ್ ಮಾಡಿದೆ. ಆದರೆ ಪರಿಶಿಷ್ಟ ಜಾತಿಯ ಸೇವಾಲಾಲ್ ಭವನ ಸೇರಿದಂತೆ ಇತರೆ ಕಟ್ಟಡಗಳ ಜಾಗವನ್ನು ಮಾತ್ರ ತೆರವುಗೊಳಿಸಿ, ಪಂಚಾಚಾರ್ಯ ಕಲ್ಯಾಣ ಮಂಟಪದ ಜಾಗವನ್ನು ಮಾತ್ರ ತೆರವುಗೊಳಿಸದೆ ತಾರತಮ್ಯ ಎಸಗಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ನಗರಸಭೆ ಅದಿಕಾರಿಗಳು ಪಂಚಾಚಾರ್ಯ ಕಲ್ಯಾಣ ಮಂಟಪದ ಕಟ್ಟಡವನ್ನು ಮಾತ್ರ ತೆರವುಗೊಳಿಸಿಲ್ಲ. ಈ ವಿಷಯವಾಗಿ ಅಧಿಕಾರಿಗಳನ್ನು ವಿಚಾರಿಸಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಎಲ್ಲ ಕಟ್ಟಡಗಳಿಗೆ ಮಾರ್ಕ್ ಮಾಡಿ ತೆರವುಗೊಳಿಸಿರುವಂತೆ ಈ ಕಟ್ಟಡವನ್ನು ತೆರವುಗೊಳಿಸಬೇಕು. ತೆರವುಗೊಳಿಸದೆ ಇದ್ದರೆ ಈಗಾಗಲೇ ನಿರ್ಮಾಣಗೊಂಡಿರುವ ಸರ್ವೀಸ್ ರಸ್ತೆಯು ಉಪಯೋಗಕ್ಕೆ ಬಾರದಂತಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರೊಂದಿಗೆ ಅವರು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಈ ವಿಚಾವಾಗಿ ಚಿತ್ರದುರ್ಗ ದ ಶಾಸಕರು ಏನು ಹೇಳುತ್ತಾರೆ.?

About The Author

Leave a Reply

Your email address will not be published. Required fields are marked *