May 15, 2024

Chitradurga hoysala

Kannada news portal

ಅಂಬೇಡ್ಕರ್ ಕುರಿತು ಹೆಚ್ಚಿನ ಅನುಕಂಪ ತೋರುವ ಕಾಂಗ್ರೆಸ್ ಪಕ್ಷವು ಅಂಬೇಡ್ಕರ್‌ ನ್ನು ಚುನಾವಣೆಯಲ್ಲಿ ಸೋಲಿಸಿತು ,ಸಚಿವ ಕೆ.ಎಸ್.ಈಶ್ವರಪ್ಪ ____ ಗುರು ಪೀಠ ಟ್ರಸ್ಟ್ ನ ಅಭಿವೃದ್ಧಿಗೆ 3 ಕೋಟಿ ಅನುದಾನ. ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

1 min read

ಅಂಬೇಡ್ಕರ್ ಕುರಿತು ಹೆಚ್ಚಿನ ಅನುಕಂಪ ತೋರುವ ಕಾಂಗ್ರೆಸ್ ಪಕ್ಷವು ಅಂಬೇಡ್ಕರ್‌ನ್ನು ಚುನಾವಣೆಯಲ್ಲಿ ಸೋಲಿಸಿತು,ಸಚಿವ ಕೆ.ಎಸ್.ಈಶ್ವರಪ್ಪ ____ ಗುರು ಪೀಠ ಟ್ರಸ್ಟನ ಅಭಿವೃದ್ಧಿಗೆ 3 ಕೋಟಿ ಅನುದಾನ. ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

ಚಿತ್ರದುರ್ಗ ನಗರದ ಹೊರವಲಯದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಜೀವನದಲ್ಲಿ ಸಾಕಾಗುವಷ್ಟು ಕುಡಿದಿದ್ದೇವೆ. ಆದರೂ, ಚುನಾವಣೆಯಲ್ಲಿ ನೀಡುವ ಆಮಿಷಗಳಿಗೆ, ನೀಡುವ ಹೆಂಡ, ಹಣಕ್ಕೆ ಮನಸೋಲುತ್ತೇವೆ. ಇಂತಹ ಮನಸ್ಥಿತಿಯಿಂದ ನಾವೆಲ್ಲರೂ ಹೊರಬಂದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಈವರೆಗೆ ನಮ್ಮಿಂದ ನಾವು ಹಾಳಾಗಿದ್ದೇವೆ. ಇನ್ನು ಮುಂದೆಯೂ ಹೀಗೆ ಆಗುವುದು ಬೇಡ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸೋಣ. ಮಕ್ಕಳನ್ನು ವಿದ್ಯಾವಂತರಾಗಿ ಮಾಡೋಣ ಎಂದು ತಿಳಿಸಿದರು.

ದಲಿತರು ಮತ್ತು ಹಿಂದುಳಿದ ವರ್ಗದವರ ಉದ್ದಾರ ಮಾಡುವ ಮಾತುಗಳನ್ನು ಬಹುತೇಕ ರಾಜಕೀಯ ಪಕ್ಷಗಳ ನಾಯಕರು ಹೇಳಿರುವುದನ್ನು ನಾವು ಕೇಳಿದ್ದೇವೆ. ಸ್ವಾತಂತ್ರ್ಯ ಬಂದಾಗಿನಿಂದ ಅತಿ ಹೆಚ್ಚು ಅಧಿಕಾರ ಅನುಭವಿಸಿದ ಪಕ್ಷ ದಲಿತ ನಾಯಕರನ್ನು ಮುಖ್ಯಮಂತ್ರಿ ಮಾಡಲಿಲ್ಲ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ಮಾಡಿದರು.

ಕಾಂಗ್ರೆಸ್ ಪಕ್ಷವು ತನ್ನ ಜವಾಬ್ದಾರಿ ನಿರ್ವಹಿಸುವುದನ್ನು ಮರೆತು ಬಿಜೆಪಿಗೆ ದಲಿತರನ್ನು ಮುಖ್ಯಮಂತ್ರಿ ಮಾಡಲು ಸವಾಲು ಹಾಕಿದೆ. ಕೇಂದ್ರ ಮಂತ್ರಿ ಮಂಡಲದಲ್ಲಿ 47 ಸಚಿವರು ದಲಿತ ಮತ್ತು ಹಿಂದುಳಿದ ವರ್ಗದವರಿಗೆ ಅಧಿಕಾರ ನೀಡಲಾಗಿದೆ ಎನ್ನುವುದನ್ನು ಕಾಂಗ್ರೆಸ್ ಮರೆಯಬಾರದು ಎಂದು ತಿರುಗೇಟು ನೀಡಿದರು.

ಈಗ ಅಂಬೇಡ್ಕರ್ ಕುರಿತು ಹೆಚ್ಚಿನ ಅನುಕಂಪ ತೋರುವ ಕಾಂಗ್ರೆಸ್ ಪಕ್ಷವು ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿತು. ಅಂಬೇಡ್ಕರ್‌ ನಿಧನರಾದಾಗ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಜಾಗ ನೀಡಲಿಲ್ಲ. ಈಗ ದಲಿತರ ಉದ್ಧಾರದ ಮಾತುಗಳನ್ನು ಆಡಲಾಗುತ್ತಿದೆ. ವಿದ್ಯಾವಂತರು ಈ ಬಗ್ಗೆ ಆಲೋಚಿಸಬೇಕು. ಸಮುದಾಯದ ಹಿತಕ್ಕೆ ಯಾರು ಸೂಕ್ತ ಎಂಬುದನ್ನು ನಿರ್ಧರಿಸಬೇಕು. ಪಕ್ಷಕ್ಕೆ ನಿಷ್ಠೆ ತೋರಿದ ಎ.ನಾರಾಯಣಸ್ವಾಮಿ ಅವರಿಗೆ ಲೋಕಸಭಾ ಚುನಾವಣೆಯ ಟಿಕೆಟ್ ಕೊಡಿಸಲು ಪ್ರಯತ್ನಿಸಿದೆ. ಎಂದು ತಿಳಿಸಿದರು.

ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರು ಪೀಠ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಈಶ್ವರಪ್ಪನವರ ಬಾಯಲ್ಲಿ ಬೆಂಕಿಯಂತಹ ಮಾತುಗಳು ಹೊರಬರುತ್ತವೆ. ಈಶ್ವರಪ್ಪ ಆಡುವ ಮಾತುಗಳು ಸ್ವಲ್ಪ ಮಟ್ಟಿಗೆ ಕಟ್ಟಿಣ. ಆದರೆ ಅವರ ಹೃದಯ ಮನಸು ಅತ್ಯಂತ ಮೃದು, ಅವರಿಗೆ ಮಾತೃ ಹೃದಯಿವಿದೆ. ಹಸುವಿನಂತಹ ಮನಸು ಉಳ್ಳವರು ಎಂದು ತಿಳಿಸಿದರು.

ಈಶ್ವರಪ್ಪನವರು ದಲಿತರ ಹಾಗು ಹಿಂದುಳಿದ ಸಮುದಾಯಗಳ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದಾರೆ. ಮಠಗಳಿಗೆ ಸರ್ಕಾರದ ಅನುದಾನ ಸಿಗಲು ಇವರ ಶ್ರಮವೂ ಬಹಳಷ್ಟು ಇದೆ. ಸಚಿವರಾಗಿ ಶಿವಮೊಗ್ಗಕ್ಕೆ ತೆರಳಿದ ಅವರು ಹರಿಜನ ಕೇರಿಗೆ ಭೇಟಿ ನೀಡಿ ಮಾದಿಗ ಸಮುದಾಯದ ಕಾರ್ಯಕರ್ತನ ಮನೆಯ ಹಾಲು ಸ್ವೀಕರಿಸಿದ್ದು ಸಾಮರಸ್ಯದ ಸಂಕೇತ ಎಂದರು.
ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರು ಪೀಠ ಟ್ರಸ್ಟ್ ನ ಅಭಿವೃದ್ಧಿಗೆ 3 ಕೋಟಿ ಅನುದಾನ ನೀಡಿದ್ದಾರೆ. ಸಮುದಾಯದ ಮೇಲಿನ ಪ್ರೀತಿಯಿಂದ ಶಿವಮೊಗ್ಗದಲ್ಲಿ ಭೂಮಿಯನ್ನು ನೀಡಿದ್ದಾರೆ. ದಲಿತ ಮತ್ತು ಹಿಂದುಳಿದ ಸಮುದಾಯದ ಮಠಗಳ ಬಗ್ಗೆ ಅವರು ತೋರುವ ಕಾಳಜಿ ಅಪಾರ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಶಿವಮೊಗ್ಗ ಜಿಪಂ ಮಾಜಿ ಸದಸ್ಯ, ಕಾಂತೇಶ್ , ಮಾದರ ಮಠದ. ಮುಖ್ಯಸ್ಥರಾದ ಕವಾಡಿಗರ ಹಟ್ಟಿ ಮಲ್ಲಿಕಾರ್ಜುನ, ಸ್ವಾಮೀಜಿಯವರ ಸೇವಾಕರಾದ ಹರೀಶ್, ವಿಶ್ವನಾಥ ಮತ್ತಿತರರು ಇದ್ದರು.

About The Author

Leave a Reply

Your email address will not be published. Required fields are marked *