ಬಿಜೆಪಿ ಯುವ ಮೋರ್ಚಾಕ್ಕೆ ಡಾ.ಸಂದೀಪ್ ಸಾರಥಿ.
1 min readನ್ಯೂಸ್ 19 ಕನ್ನಡ ಜೊತೆ ಯುವ ಮೋರ್ಚಾ ಅಧ್ಯಕ್ಷರ ಮಾತು.
ಬೆಂಗಳೂರು: ಕಳೆದ ನಾಲ್ಕು ವರ್ಷಗಳ ಹಿಂದಷ್ಟೇ ಬಿಜೆಪಿ ಸೇರಿದ್ದ ಡಾ. ಸಂದೀಪ್ ಅವರನ್ನು ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ. ಸಂಸದ ಪ್ರತಾಪ್ ಸಿಂಹ ಅವರು ಯುವ ಮೋರ್ಚಾ ರಾಜ್ಯಾಧ್ಯಕ್ಷರಾಗಿದ್ದ ವೇಳೆಯಲ್ಲಿ ಡಾ. ಸಂದೀಪ್ ಬಿಜೆಪಿಯನ್ನು ಸೇರಿದ್ದರು.
ಈ ವಿಚಾರದಲ್ಲಿಯೂ ಬಿ.ವೈ. ವಿಜಯೇಂದ್ರ ಅವರಿಗೆ ಹಿನ್ನೆಡೆಯಾಗಿದೆ ಎನ್ನಲಾಗಿದೆ. ತಮ್ಮ ಆಪ್ತ ತಮ್ಮೇಶ್ ಗೌಡ ಅವರನ್ನು ಯುವ ಮೋರ್ಚಾ ಅಧ್ಯಕ್ಷರನ್ನಾಗಿಸಲು ವಿಜಯೇಂದ್ರ ಪ್ರಯತ್ನ ನಡೆಸಿದ್ದರು. ಹಾಗೆಯೇ ಯುವ ಮೋರ್ಚಾ ಅಧ್ಯಕ್ಷ ಹುದ್ದೆಗೆ ಸಚಿವ ವಿ. ಸೋಮಣ್ಣ ಪುತ್ರ ಡಾ. ಅರುಣ್ ಸೋಮಣ್ಣ ಅವರೂ ಪ್ರಯತ್ನ ನಡೆಸಿದ್ದರು.
ನಮ್ಮ ನ್ಯೂಸ್ 19 ಕನ್ನಡದ ವರದಿಗಾರರ ಜೊತೆ ಮಾತನಾಡಿದ ಡಾ. ಸಂದೀಪ್ ಅವರು ತಮ್ಮ ಮನದ ಮಾತನ್ನು ಬಿಚ್ಚಿಟ್ಟರು. ಸಾಮಾನ್ಯ ಕಾರ್ಯಕರ್ತನಿಗೆ ಸಂದ ಗೌರವ.
ಈ ಜವಾಬ್ದಾರಿಯನ್ನು ನೀಡಿ ನನ್ನನ್ನು ಸಮಾಜ ಸೇವೆಗೆ ಇನ್ನಷ್ಟು ತೆರೆದುಕೊಳ್ಳುವಂತೆ ಮಾಡಿ ದೊಡ್ಡ ಜವಾಬ್ದಾರಿಯನ್ನು ನೀಡಿದ ಭಾರತೀಯ ಜನತಾ ಪಕ್ಷಕ್ಕೆ ಕೃತಜ್ಞತೆಗಳು. ಈ ಮಟ್ಟಕ್ಕೆ ಅವಕಾಶ ಮಾಡಿಕೊಟ್ಟ ಸಂಘ ಪರಿವಾರದ ಎಲ್ಲ ಹಿತೈಷಿಗಳು ,ಮಾರ್ಗದರ್ಶಕರ ಆಶೀರ್ವಾದದೊಂದಿಗೆ , ಭಾರತೀಯ ಜನತಾ ಪಕ್ಷದ ಎಲ್ಲ ವರಿಷ್ಠರಿಗೂ ಹಾಗೂ ಅಧ್ಯಕ್ಷರಿಗೂ,ಎಲ್ಲಾ ಗುರು ಹಿರಿಯರಿಗೂ, ಪದಾಧಿಕಾರಿಗಳಿಗೂ ಈ ಮೂಲಕ ಹೃದಯಪೂರ್ವಕ ಕೃತಜ್ಞತೆಗಳನ್ನು ತಿಳಿಸುತ್ತೇನೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸಹಃ ಮುಂಚೂಣಿಯಲ್ಲಿ ಗುರುತಿಸಿ ರಾಜ್ಯದ ಯುವ ಸಮೂಹವನ್ನು ಸಂಘಟಿಸುವ ಇಂತಹ ಗುರುತರ ಜವಾಬ್ದಾರಿಯನ್ನು ನೀಡಿದ್ದಕ್ಕೇ ಧನ್ಯನಾಗಿದ್ದೇನೆ, ಪಕ್ಷದ ಸಾಮಾನ್ಯ ಕಾರ್ಯಕರ್ತನೂ ಭಾರತೀಯ ಜನತಾ ಪಕ್ಷದ ದೊಡ್ಡ ಶಕ್ತಿ ಎಂಬುದನ್ನು ಈ ದೂರದೃಷ್ಠಿತ್ವ ಬಿಂಬಿಸುತ್ತಿದೆ.
ಜನಸೇವೆಯೇ ಜನಾರ್ದನ ಸೇವೆ ಎಂದು ಜನ ಸೇವೆಗೆ ಮೀಸಲಾಗಿದ್ದ ಈ ಸಾಮಾನ್ಯ ಕಾರ್ಯಕರ್ತನನ್ನು ರಾಜ್ಯದ ಯುವಮೊರ್ಚಾ ಅಧ್ಯಕ್ಷನನ್ನಾಗಿ ಮಾಡಿದ್ದಕ್ಕೆ ದನ್ಯೋಸ್ಮಿ. ಈ ಮೂಲಕ ತಮ್ಮೆಲ್ಲರ ಪ್ರೀತಿ ವಿಶ್ವಾಸ ಹಾಗೂ ಮಾರ್ಗದರ್ಶನವನ್ನು ಬಯಸುತ್ತೇನೆ ಎಂದು ತಮ್ಮ ಮನದಾಳದ ಮಾತನ್ನು ನ್ಯೂಸ್19 ಕನ್ನಡ ಜೊತೆ ಮಾತನಾಡಿದರು.