ಜಿಲ್ಲೆಯ ಜನತೆಗೆ ಕೊಟ್ಟ ಮಾತನ್ನು ಎಂದು ತಪ್ಪುವುದಿಲ್ಲ : ಕೆ.ಎಸ್ ನವೀನ್
1 min readಚಿತ್ರದುರ್ಗ: ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ನೂತನ ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಕೆ.ಎಸ್.ನವೀನ್ ಅವರಿಗೆ ಶುಭ ಹಾರೈಸಿದರು.
ಬಿಜೆಪಿ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್ ರಾಜ್ಯ ಬಿಜೆಪಿಯ ಪದಾಧಿಕಾರಿ ಆಗುವಂತಹ ಅವಕಾಶ ಮತ್ತು ಪಕ್ಷ ಸಂಘಟನೆ ಮಾಡುವ ಸೌಭಾಗ್ಯವನ್ನು ಪಕ್ಷ ಸಿಕ್ಕಿರುವುದಕ್ಕೆ ಸಂಪೂರ್ಣ ಯಶಸ್ಸನ್ನು ಬಿಜೆಪಿಯ ಎಲ್ಲಾ ಕಾರ್ಯಕರ್ತರಿಗೆ ಸಲ್ಲಿಸುತ್ತೇನೆ. ಕಾರ್ಯಕರ್ತರು ಸಕ್ರಿಯಾವಾದರೆ ಪಕ್ಷ ಸಕ್ರಿಯಾವಾಗಿರುತ್ತದೆ. ಜಿಲ್ಲೆಯ ಯೋಜನೆಗಳನ್ನು ಅದಷ್ಟು ಬೇಗ ಕೆಲಸ ಮುಗಿಸಬೇಕು ಎಂನ ಉದ್ದೇಶವಾಗಿದೆ. ಜಿಲ್ಲೆಯ ಪಕ್ಷದ ಗೆಲುವಿನ ಮೇಲೆ ನನಗೆ ರಾಜ್ಯದ ಮುಖ್ಯಮಂತ್ರಿ ಮತ್ತು ಪರಿವಾರದ ಎಲ್ಲಾರೂ ನನ್ನನ್ನು ಗುರುತಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮದೆ ಸರ್ಕಾರ ಇದ್ದು ಕ್ರಿಯಾಶೀಲತೆಯಿಂದ ಜಿಲ್ಲೆಯ ಜನರಿಗೆ ರಾಜ್ಯ ಮತ್ತು ಕೇಂದ್ರದ ಯೋಜೆನಗಳನ್ನು ಬಡವರಿಗೆ , ಸೌಲಭ್ಯ ವಂಚಿಯರಿಗೆ ತಲುಪಿಸುವ ಕೆಲಸ ಮಾಡಬೇಕು. ರೈತರಿಗೆ ಅನುಕೂಲ ಆಗುವಂತೆ ಮಾಡಲು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮತ್ತು ಪರಿಸರ ರಕ್ಷಣೆ ಮಾಡಬೇಕು. ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಬಾವುಟವನ್ನು ಹಾರಿಸಲು ಎಲ್ಲಾರೂ ಶ್ರಮಿಸಬೇಕು ಎಂದರು. ತುಮಕೂರು ನೇರ ರೈಲು ಮಾರ್ಗ ಯೋಜನೆಗೆ ಕೈಗೆತ್ತಿಕೊಳ್ಳಲು ಕ್ರಮ ವಹಿಸಲಾಗಿದೆ.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ಮುರುಳಿ ಮಾತನಾಡಿ ರಾಜ್ಯದಲ್ಲಿ ಪಕ್ಷದ ಪ್ರಮಾಣಿಕ ಕೆಲಸಗಾರರಿಗೆ ಅಧಿಕಾರ ನೀಡಿರುವುದು ಸಂತೋಷದ ವಿಚಾರವಾಗಿದೆ. ಪಕ್ಷದ ಅಧ್ಯಕ್ಷರಾಗಿದ್ದ ನವೀನ್ ಅವರು ಪಕ್ಷದ 1648 ಬೂತಗಳಲ್ಲಿ ಪ್ರವಾಸ ಮಾಡಿ ಸಂಘಟನೆ ಮಾಡಿದ್ದೇವೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸಾಕಷ್ಟು ಶ್ರಮದಿಂದ ಜಿಲ್ಲೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ಅನುಕೂಲವಾಯಿತು. ಪಕ್ಷದ ಮುಖಂಡರು ಬೆಳಗಾಂ ನಲ್ಲಿನಡೆದ ಕಾರ್ಯಕಾರಿಣಿಯಲ್ಲಿ ನಮ್ಮ ಜಿಲ್ಲೆ ಸಿ ಪಟ್ಟಿಗರ ಸೇರಿಸಿದ್ದರು. ಆದರೆ ಪಕ್ಷದ ಅಧ್ಯಕಗಷರಾಗಿದ್ದ ನವೀನ್ ಅವರು ರಾಜ್ಯ ಕಾರ್ಯದರ್ಶಿ ಆಗಿರುವುದಕ್ಕೆ ಜಿಲ್ಲಾ ಬಿಜೆಪಿ ಅವರ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಜಿಲ್ಲಾ ಬಿಜೆಪಿಗೆ ಶಕ್ತಿ ಬಂದಿದೆ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ನಗರ ಅಧ್ಯಕ್ಷರುಗಳಾದ ಶಶಿಧರ್, ಸಿದ್ದಪುರ ಸುರೇಶ್ , ಗ್ರಾಮಾಂತರ ಅಧ್ಯಕ್ಷ ನಂದಿನಾಗರಾಜ್, ಮಹಿಳಾ ಮೋರ್ಚಾದ ಚಂದ್ರಿಕ ಲೋಕನಾಥ್, ಯುವ ಮೋರ್ಚಾ ಅಧ್ಯಕ್ಷ ಹನುಮಂತೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ಮಾಜಿ ನಗರಾಭಿವೃದ್ಧಿ ಅಧ್ಯಕ್ಷ ತಿಪ್ಪೇಸ್ವಾಮಿ, ಸೇತುರಾಂ, ನಾಗರಾಜ್ ಬೇಂದ್ರೆ ಇದ್ದರು.