ತುರುವನೂರು ಕಾಲೇಜು ಸ್ಥಳಾಂತರ ಆದೇಶ ರದ್ದುಗೊಳಿಸಿ: ಸಂಸದ ಎ.ನಾರಾಯಣಸ್ವಾಮಿ
1 min readಇಂದು ತುರುವನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಳಾಂತರ ಮಾಡಿರುವ ವಿಷಯದ ಬಗ್ಗೆ ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಾದಂತಹ ಶ್ರೀ ಡಾ. ಸಿ.ಎನ್. ಅಶ್ವತ್ಥನಾರಾಯಣ ರವರನ್ನು ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಭೇಟಿ ಮಾಡಿ ತುರುವನೂರು ಕಾಲೇಜು ಸ್ಥಳಾಂತರ ಆದೇಶ ರದ್ದುಗೊಳಿಸಲು ತಿಳಿಸಿದ್ದಾರೆ.
. ತುರುವನೂರಿನ ಕಾಲೇಜಿನ ಅನಿವಾರ್ಯತೆಯ ಮತ್ತು ಅವಶ್ಯಕತೆಯ ಬಗ್ಗೆ ಸ್ಪಷ್ಟವಾಗಿ ಸಚಿವರಲಿ ವಿವರಿಸಲಾಯಿತು ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು ಸರ್ಕಾರದ ಮಾರ್ಗಸೂಚಿಯಂತೆ ನಿರೀಕ್ಷಿತ ಸಂಖ್ಯೆಯ ವಿದ್ಯಾರ್ಥಿಗಳ ದಾಖಲಾತಿ ಆಗದಿದ್ದಲ್ಲಿ ಅವಶ್ಯಕ ವಿದ್ಯಾರ್ಥಿಗಳ ಬೇಡಿಕೆ ಇರುವ ಸ್ಥಳಕ್ಕೆ ಸ್ಥಳಾಂತರಿಸುವ ಅನಿವಾರ್ಯತೆ ಉಂಟಾಗುತ್ತದೆ ಎಂದು ವಿವರಿಸಿದರು, ನನ್ನ ಮತ್ತು ನಮ್ಮ ಕ್ಷೇತ್ರದ ಜನತೆಯ ಮನವಿಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ ಸಚಿವರು ಪ್ರಸಕ್ತ ಬರುವ ಸಾಲಿನಲ್ಲಿ ನಿರೀಕ್ಷಿತ ವಿದ್ಯಾರ್ಥಿಗಳು ದಾಖಲಾತಿಯಾದಲ್ಲಿ ತುರುವನೂರಿಂದ ಕಾಲೇಜನ್ನು ಸ್ಥಳಾಂತರಿಸುವ ಪ್ರಶ್ನೆಯ ಇರುವುದಿಲ್ಲ, ನಿರೀಕ್ಷೆಗೂ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾತಿಯಾಗಿದ್ದಲ್ಲಿ ಸ್ಥಳಾಂತರಿಸುವ ಆದೇಶವನ್ನು ರದ್ದುಪಡಿಸಿ ಅದರ ಜೊತೆ ಹೊಸ ಕಾರ್ಯಬಾರಕ್ಕೆ ಅನುಗುಣವಾಗಿ ಸಿಂಬ್ಬಂದಿ ಮತ್ತು ಕಾಲೇಜಿಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅನುದಾನವನ್ನು ನೀಡವುದರ ಜೊತೆಗೆ ಹೊಸ ಶಿಕ್ಷಣ ನೀತಿಯ ಆಧಾರದಡಿಯಲ್ಲಿ ಯೋಜನೆ ರೂಪಿಸುತ್ತೇನೆ ಎಂಬ ಭರವಸೆಯನ್ನು ನೀಡಿದರು ಈ ಸಂದರ್ಭದಲ್ಲಿ ಚಳ್ಳಕೆರೆ ಮಂಡಲ ಅಧ್ಯಕ್ಷರಾದ ಸೂರನಳ್ಳಿ ಶ್ರೀನಿವಾಸ್ ಉಪಸ್ಥಿತರಿದ್ದರು.