ಏಕೆ ಶಿಕ್ಷಣ ಸಚಿವರೆ ನಮ್ಮ ಮಕ್ಕಳ ಮೇಲೆ ಕೋಪ?
1 min readವಿಶೇಷ ವರದಿ: ರಾಜ್ಯದ ಶಿಕ್ಷಣ ಸಚಿವರಾದ ಹಾಗೂ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರು ತುರುವನೂರು ಪ್ರಥಮ ದರ್ಜೆ ಕಾಲೇಜು ಸ್ಥಳಾಂತರ ಮಾಡಿರುವುದು ಖಂಡಿಸಿ ಪ್ರತಿಭಟಸುತ್ತಿರುವ ಶಾಸಕ ಟಿ.ರಘುಮೂರ್ತಿ ಮತ್ತು ಕಾಲೇಜಿನ ವಿದ್ಯಾರ್ಥಿಗಳ ಕೂಗು ನಿಮ್ಮ ಕಿವಿಗೆ ತಲುಪಿದೆಯಾ ಅಥವಾ ಶೈಕ್ಷಣಿಕ ವಿಚಾರದಲ್ಲಿ ಪಕ್ಷ ರಾಜಕಾರಣ ಮಾಡುತ್ತಿದ್ದಿರ ಎಂಬುದು ತಿಳಿಯುತ್ತಿಲ್ಲ. ಕಳೆದ ವರ್ಷ ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಆ ಭಾಗದಲ್ಲಿ ಇರುವುದು ಒಂದೇ ಕಾಲೇಜು ಅವರು ಬಸ್ ಚಾರ್ಜ್ ಇಟ್ಟಕೊಂಡು ಬರುವಷ್ಟು ಚೈತನ್ಯ ಸಹ ಇಲ್ಲ ಆದರೆ ಎಲ್ಲಾ ಮೂಲಭೂತ ಕಲ್ಪಸುತ್ತಿರುವ ಕಾಲೇಜನ್ನು ಸ್ಥಳಾಂತರ ಮಾಡಿರುವುದು ಎಷ್ಟು ಸರಿ ಸ್ವಾಮಿ ಶಿಕ್ಷಣ ಸಚಿವರೆ. ಆದರೆ ಕಾಂಗ್ರೆಸ್ ಶಾಸಕರು ಎಂಬ ಕಾರಣಕ್ಕೆ ಸ್ಥಳಾಂತರ ಮಾಡಿದ್ದಿರ ಅಥವಾ ಬಯಲು ಸೀಮೆಯ ವಿದ್ಯಾರ್ಥಿಗಳು ಉನ್ನತ ಅಭ್ಯಾಸ ಮಾಡವುದು ಸಹ ಇಷ್ಟವಿಲ್ವ ಸರ್. ತುರುವನೂರು ಪ್ರಥಮ ದರ್ಜೆ ಕಾಲೇಜು ನೂರಾರು ಹಳ್ಳಿಗಳ ಪರಿಶಿಷ್ಟ ಜಾತಿ ,ಪರಿಶಿಷ್ಟ ಪಂಗಡ, ಹಿಂದುಳಿದ ಬಡ ಮಕ್ಕಳಿಗೆ ಮತ್ತು ವಿಶೇಷವಾಗಿ ಹೆಣ್ಣು ಮಕ್ಕಳ ಅಭ್ಯಾಸಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಮಾಡಲಾಗಿತ್ತು ಆದರೆ ಅದೇ ಮಕ್ಕಳು ನಮ್ಮ ಊರಿನಲ್ಲಿ ಕಾಲೇಜು ಇದ್ದಿದ್ದರೆ ಏನಾದರೂ ಮಾಡಿ ಕೆಲಸ ಮಾಡಿಕೊಂಡು ಸಹ ಡಿಗ್ರಿ ಮುಗಿಸಿಕೊಳ್ಳತ್ತಿದ್ದಿವಿ ಎಂಬ ಮಾತು ವಿದ್ಯಾರ್ಥಿ ವಲಯದಲ್ಲಿ ಕೇಳಿ ಬರುತ್ತಿದೆ. ತಾವು ಚಳ್ಳಕೆರೆಗೆ ಬಿಜೆಪಿ ಶಾಸಕರು ಆಗಿ ಅವರು ಪ್ರತಿಭಟನೆ ಮಾಡಿದ್ದರೆ ಹೀಗೆ ಕಣ್ಮಚ್ಚಿ ಕಂಡು ಕಾಣದಂತೆ ಇರುತ್ತಿದ್ದರ ಹೇಳಿ!
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಐದು ಜನ ಶಾಸಕರು ಮತ್ತು ಸಂಸದರನ್ನು ಸಹ ನೀಡಿದ ಜಿಲ್ಲೆ ಇಷ್ಟು ನಿಮ್ಮ ಪಕ್ಷಕ್ಕೆ ನೀಡಿದ ಜಿಲ್ಲೆಯ ಕಾಲೇಜಿನಲ್ಲಿ ನೀವು ಸ್ಥಳಾಂತರ ಮಾಡಿದ್ದು ಏಕೆ ಸ್ವಾಮಿ ಉತ್ತರ ನೀಡಿ. ಮಕ್ಕಳ ಕೊರತೆ ಇಲ್ಲ, ಮೂಲ ಸೌಕರ್ಯ ಕೊರತೆ ಇಲ್ಲ, ಇರುವ ಉಪನ್ಯಾಸಕರನ್ನು ನೀವು ಸ್ಥಳಾಂತರ ಗೊಳಿಸಿದ್ದಿರಿ. ರಾಜಕಾರಣ ಬಿಟ್ಟು ಸ್ವಾಮಿ ಸಾವಿರಾರು ಗ್ರಾಮೀಣ ಭಾಗದ ಮಕ್ಕಳ ಉನ್ನತ ಶಿಕ್ಷಣಕ್ಕೆ ಒತ್ತು ನೀಡುವ ಕನಸಾಗಿರುವ ಪ್ರಥಮ ದರ್ಜೆ ಕಾಲೇಜು ನಮ್ಮ ಜಿಲ್ಲೆಗೆ ಉಳಿಸುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ. ನಿಪ್ಪಾಣಿಗೆ ಬೇಕಾದರೆ ಹೊಸ ಕಾಲೇಜು ನೀಡಿ. ನಿಮ್ಮ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದಂತೆ ನಡೆಯುತ್ತಾರೆ ಮತ್ತು ಪಕ್ಷ ರಾಜಕಾರಣ ಎಂದು ಮಾಡಲ್ಲ ಎಂಬ ಮಾತಿದೆ ಅದೆ ದಾರಿಯಲ್ಲಿ ನೀವು ಸಹ ನಡೆದು ತುರುವನೂರು ಪ್ರಥಮ ದರ್ಜೆ ಕಾಲೇಜು ಉಳಿಸಿ ಈ ಭಾಗದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುತ್ತಿರ ಎಂಬ ಆಶಾ ಭಾವನೆಯಲ್ಲಿ ಇದ್ದಾರೆ.