ಮನೆ ಇಲ್ಲದವರನ್ನು ಗುರುತಿಸಿ ನಿವೇಶನ ನೀಡಲಾಗುವುದು: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ
1 min readಚಿತ್ರದುರ್ಗ: ಒಂದೇ ಮನೆಯಲ್ಲಿ ಎರಡು ಮೂರು ಕುಟುಂಬಗಳು ಇರುವವರನ್ನು ಗುರುತಿಸಿ ಅಂತವರಿಗೆ ನಿವೇಶನ ಕೊಡುವುದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ತಾಲೂಕಿನ ದೊಡ್ಡಸಿದ್ದವನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಓರಗಂಟರಮಾಳಿಗೆ ಗ್ರಾಮದಲ್ಲಿ ನಿವೇಶನ ರಹಿತ ಫಲಾನುಭವಿಗಳಿಗೆ ಹಕ್ಕುಪತ್ರವನ್ನು ನೀಡಿ ಮಾತನಾಡಿದ ಶಾಸಕರು ಗ್ರಾಮದದಲ್ಲಿ ನಿವೇಶನ ರಹಿತ ನಿವಾಸಿಗಳಿಗೆ 2.9 ಎಕರೆ ಜಮೀನಿನಲ್ಲಿ ಅಶ್ರಯ ಗ್ರಾಮೀಣ ನಿವೇಶನ ಯೋಜನೆಯಡಿಯಲ್ಲಿ 30-40 ಆಳತೆ ನಿವೇಶನ ವಿಂಗಡಣೆ ಮಾಡಲಾಗಿದ್ದು ಇದರಲ್ಲಿ 38 ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ನೀಡಲಾಗುತ್ತಿದೆ ಎಂದರು.
ಕಳೆದ 15 ವರ್ಷದ ಕೆಳಗೆ ಗ್ರಾಮದಲ್ಲಿ ಗ್ರಾಮಸಭೆಯಲ್ಲಿ ಆಯ್ಕೆ ಮಾಡಿದ್ದ ಫಲಾನುಭವಿಗಳಿಗೆ ಈಗ ಹಕ್ಕುಪತ್ರ ವಿತರಿಸಲಾಗುತ್ತಿದೆ. ಇನ್ನು 09 ನಿವೇಶನ ಉಳಿದಿದ್ದು ಮನೆಯಲ್ಲಿ ಎರಡು, ಮೂರು ಕುಟುಂಬಗಳು ಇರುವವರನ್ನು ಗುರುತಿಸಿ ಇದರಲ್ಲಿ ಮನೆ ಇಲ್ಲದವರನ್ನು ಗುರುತಿಸಿ ನಿವೇಶನ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಆಶ್ರಯ ಯೋಜನೆಯಡಿ ನಿವೇಶನಗಳನ್ನು ನಿರ್ಮಾನ ಮಾಡಿ ನಿವೇಶನ ರಹಿತರಿಗೆ ಸೈಟ್ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಡ್ಲೆಗುದ್ದು, ತಮಟಕಲ್ಲು, ಬೆನಕನಹಳ್ಳಿ, ಹಿರೇಗುಂಟನೂರು, ಮಳಲಿ ಡಿ.ಎಸ್ ಹಳ್ಳಿ ದೊಡ್ಡಪುರ ಗೊಡಬನಾಳ್ ಗ್ರಾಮಗಳ ಆಶ್ರಯ ನಿವೇಶನ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಅನುಮೋದನೆ ನೀಡಿದ್ದು ಜಮೀನನ್ನು ಗುರುತಿಸುವ ಪಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಸದಸ್ಯೆ ಸೌಭಾಗ್ಯ ಬಸವರಾಜನ್ ಮಾತನಾಡಿ 38 ಫಲಾನುಭವಿಗಳಿಗೆ ಹಕ್ಕು ಪತ್ರ ನಿಡಲಾಗಿದ್ದು ನಿವೇಶನ ಇಲ್ಲದವರಿಗೆ ನಿವೇಶನ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ರಸ್ತೆ, ಚರಂಡಿ ಅಗತ್ಯವಾದ ಮೂಲ ಸೌಕರ್ಯಗಳನ್ನು ನೀಡಿ ವ್ಯಾಜ್ಯ ಮುಕ್ತ ಆದರ್ಶ ಗ್ರಾಮವನ್ನಾಗಿ ಮಾಡಲಾಗುವುದು ಎಂದು ಹೇಳಿದರು. ಅಧಿಕಾರಿಗಳು ಮತ್ತು ಗ್ರಾಮದ ಮುಖಂಡರು ಹಾಜರಿದ್ದರು