May 5, 2024

Chitradurga hoysala

Kannada news portal

ಡಿ.ಎಸ್.ಹಳ್ಳಿ ಜ್ಞಾನ ಪೂರ್ಣ ಶಾಲೆಗೆ 100% ಫಲಿತಾಂಶ: ವೆಂಕಟೇಶ್ ರೆಡ್ಡಿ

1 min read

ಚಿತ್ರದುರ್ಗ: ತಾಲೂಕಿ ದೊಡ್ಡಸಿದ್ದವ್ವನಹಳ್ಳಿ ಜ್ಞಾನ ಪೂರ್ಣ ಶಾಲೆಗೆ ಶೇಕಡಾ100% ಫಲಿತಾಂಶ ಬಂದಿದ್ದು ಶಾಲೆಯ ಮುಖ್ಯಸ್ಥರಾದ ವೆಂಕಟೇಶ್ ರೆಡ್ಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಭಾಗದ ಹೆಸರಾಂತ ಶಾಲೆಯಾಗಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದು SSLC ಯಲ್ಲಿ ಸತತ 4 ನೇ ಬಾರಿಗೆ ಉತ್ತಮ ಫಲಿತಾಂಶ ಬಂದಿದ್ದು ಶಾಲೆಯ ಏಳ್ಗೆಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರ , ಸಿಬ್ಬಂದಿಗಳ ಶ್ರಮ ಮತ್ತು ಪೋಷಕರ ಸಹಕಾರ ಕಾರಣ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಹೆಚ್ಚು ಮಕ್ಕಳನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳವಂತೆ ಮಾಡುವ ಛಲ ಇದೆ. ಒಟ್ಟು 48 ವಿದ್ಯಾರ್ಥಿಗಳಲ್ಲಿ ಅತ್ಯುನ್ನತ ಶೇಣಿ -14 ,ಉನ್ನತ ಶ್ರೇಣಿ- 33, ದ್ವಿತೀಯ ಶ್ರೇಣಿ- 01, ಮತ್ತು ನಮ್ಮ ಕನ್ನಡ ಭಾಷೆಯಲ್ಲಿ 3 ವಿದ್ಯಾರ್ಥಿಗಳು 125 ಕ್ಕೆ 125 ಅಂಕ ಗಳಿಸಿದ್ದಾರೆ. ಸಮಾಜ ವಿಜ್ಞಾನದಲ್ಲಿ 2 ವಿದ್ಯಾರ್ಥಿಗಳು 100 ಕ್ಕೆ 100 ಅಂಕ ಗಳಿಸಿದ್ದಾರೆ ಎಂದು ಹೇಳಿದರು.

About The Author

Leave a Reply

Your email address will not be published. Required fields are marked *